ಮಾಸ್ಕೊ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟೀಕಿಸಿ ಹಾಡುಗಳನ್ನು ಬರೆದು ಹಾಡಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾದ ಜನಪ್ರಿಯ ಪಾಪ್ ತಾರೆ ಡಿಮಾ ನೋವಾ (35) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಡಿಮಾ ನೋವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಕ್ರೀಮ್ ಸೋಡಾ ಮ್ಯೂಸಿಕ್ ಗ್ರೂಪ್ ಸ್ಥಾಪಿಸಿದ್ದ ಡಿಮಾ ನೋವಾ ಹಾಡಿನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ 1.3 ಬಿಲಿಯನ್ ಡಾಲರ್ ಅರಮನೆಯವನ್ನು ಟೀಕಿಸಿದ್ದಾರೆ. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಿ ಆಗಾಗ್ಗೆ ಪ್ರದರ್ಶನ ನೀಡುತ್ತಿದ್ದರು. ಇದಕ್ಕೆ ಆಕ್ವಾ ಡಿಸ್ಕೋ ಪಾರ್ಟಿ ಎಂದು ಕರೆಯಲಾಗುತ್ತಿತ್ತು. ಮಾಸ್ಕೋದ ಉಕ್ರೇನ್ ಆಕ್ರಮಣದ ವಿರುದ್ಧ ಪ್ರತಿಭಟಿಸಲು ಆಗಾಗ್ಗೆ ಈ ಹಾಡನ್ನು ಹಾಡಲಾಗುತ್ತಿತ್ತು.
ಯಾರೋಸ್ಲಾವ್ಲ್ ಪ್ರದೇಶದಲ್ಲಿ ರಷ್ಯಾದ ವೋಲ್ಗಾ ನದಿಯನ್ನು ದಾಟುವಾಗ ಡಿಮಾ ನೋವಾ ಹಿಮ ನದಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಅವಘಡದ ಸಮಯದಲ್ಲಿ ಅವರ ಸಹೋದರ ರೋಮಾ ಮತ್ತು ಇಬ್ಬರು ಸ್ನೇಹಿತರು ಜತೆಗಿದ್ದರು ಎಂದು ಹೇಳಲಾಗಿದೆ.