ಬೆಂಗಳೂರು: ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಟ್ವೀಟ್ ವಾರ್ ನಡೆಸಿದ್ದ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಸದ ಸಮಸ್ಯೆ, ರಸ್ತೆ ಹೊಂಡ ಗುಂಡಿಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸಂಬಂಧಿಸಿದ ಹಾಗೆ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮೂಲಕ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಾ ಅವರ ಟ್ವೀಟ್‌ಗಳ ಹಿಂದೆ ಇನ್ಯಾವುದೋ ಅಜೆಂಡಾ ಇದೆ ಎಂಬುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದರು.
ಇದೀಗ ಕಿರಣ್ ಮಜುಂದಾರ್ ಶಾ ಅವರು ಡಿ ಕೆ ಶಿ ಅವರನ್ನೇ ಭೇಟಿಯಾಗಿದ್ದು, ಇದು ಯಾವ ಕಾರಣಕ್ಕೆ ನಡೆದ ಭೇಟಿ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಮೂಲಗಳ ಪ್ರಕಾರ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ನಿಟ್ಟಿನಲ್ಲಿ ಈ ಭೇಟಿ ನಡೆದಿದೆ ಎನ್ನುವುದಾಗಿಯೂ ಹೇಳಲಾಗುತ್ತಿದೆ.
























