ರಾಹುಲ್ ಗಾಂಧಿಗೆ ಪ್ರಧಾನಿಯಾಗುವಷ್ಟು ಬುದ್ಧಿವಂತಿಕೆ ಇಲ್ಲ ಎಂದು ವ್ಯಂಗ್ಯ ಮಾಡಿದ ಅಮೆರಿಕಾದ ಗಾಯಕಿ

ವಾಷ್ಂಗ್ಟನ್: ಅಮೆರಿಕಾದ ಗಾಯಕಿ ಮೇರಿ ಮಿಲ್ಟೆನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ವ್ಯಂಗ್ಯವಾಡಿ ಹೇಳಿಕೆಯೊಂದನ್ನು ‌ನೀಡಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸಿ ಆಗಾಗ್ಗೆ ಹೇಳಿಕೆ ನೀಡುವ ಮೇರಿ, ಮೋದಿ ಅವರನ್ನು ಟೀಕೆ ಮಾಡಿದ ರಾಹುಲ್ ವಿರುದ್ಧ ಹೇಳಿಕೆ ನೀಡಿರುವುದಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ಆಗುವಷ್ಟು ಬುದ್ಧಿವಂತಿಕೆ ಇಲ್ಲ ಎಂದು ಅವಹೇಳನ ಮಾಡಿದ್ದಾರೆ.

ಪ್ರಧಾನಿ ಮೋದಿ ಅಮೆರಿಕಾದ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಾರೆ ಎನ್ನುವ ಹೇಳಿಕೆಯನ್ನು ರಾಹುಲ್ ನೀಡಿದ ಬೆನ್ನಲ್ಲೇ, ರಾಹುಲ್‌ನನ್ನು ತರಾಟೆಗೆ ತೆಗೆದುಕೊಂಡಿರುವ ಮೇರಿ, ರಾಹುಲ್ ಗಾಂಧಿ ಅವರೇ, ನಿಮ್ಮದು ತಪ್ಪು ಗ್ರಹಿಕೆಯಾಗಿದೆ. ಪ್ರಧಾನಿ ಮೋದಿ ಟ್ರಂಪ್‌ಗೆ ಹೆದರುವುದಿಲ್ಲ. ಅಮೆರಿಕಾದ ಜೊತೆ ಅವರ ರಾಜತಾಂತ್ರಿಕ ನಿಲುವು ಸರಿಯಾಗಿದೆ. ಭಾರತಕ್ಕೆ ಏನು ಬೇಕೋ ಅದನ್ನು ಅವರು ಮಾಡುತ್ತಿದ್ದಾರೆ. ನಾನು ಮೋದಿ ಅವರನ್ನು ಶ್ಲಾಘಿಸುತ್ತೇನೆ. ಇದೆಲ್ಲಾ ರಾಹುಲ್‌ಗೆ ಅರ್ಥವಾಗುತ್ತದೆ ಎಂಬ ನಂಬಿಕೆ ನನಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.





















































 
 
error: Content is protected !!
Scroll to Top