ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮೀರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್ (ರಿ.) ಪುತ್ತೂರು ವತಿಯಿಂದ ದೀಪಾವಳಿ ಪ್ರಯುಕ್ತ 13 ನೇ ವರ್ಷದ ‘ಅಶೋಕ ಜನ ಮನ 2025
ಇದು ಜನಸಾಮಾನ್ಯರ ನಾಡಿ ಮಿಡಿತ ಕಾರ್ಯಕ್ರಮ ಅ. 20 ರಂದು ಬೆಳಗ್ಗೆ 9.30 ಕ್ಕೆ ಕೊಂಬೆಟ್ಟು ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ.
ದೀಪಾವಳಿಯ ಪ್ರಯುಕ್ತ ವಿಶೇಷ ಗೂಡುದೀಪ ಸ್ಪರ್ಧೆ ನಡೆಯಲಿರುವುದು. ಜೊತೆಗೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ, ಸಾಮೂಹಿಕ ಸಹ ಭೋಜನ, ಸಾರ್ವಜನಿಕರಿಗೆ ದೀಪಾವಳಿಯ ಉಡುಗೊರೆ ವಿತರಣಾ ಕಾರ್ಯಕ್ರಮ ಮೊದಲಾದವು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























