ಅನಾರೋಗ್ಯ, ಚಿಕಿತ್ಸೆ ಫಲಿಸದೆ ಮೃತಪಟ್ಟ ಬಾಲಕಿ

ಬೆಳ್ತಂಗಡಿ: ಅನಾರೋಗ್ಯದ ಕಾರಣಕ್ಕೆ ಕೆಲ ಸಮಯದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಸಾನ್ವಿ ಶೆಟ್ಟಿ ಎಂಬಾಕೆಯೇ ‌ಮೃತ ದುರ್ದೈವಿ.

ಸಾನ್ವಿ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಯಶೋಧರ ಶೆಟ್ಟಿ ಅವರ ಪುತ್ರಿ. ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕೆಲ ಸಮಯದ ಹಿಂದೆ ಈಕೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ.





















































 
 
error: Content is protected !!
Scroll to Top