ರಾಜಕೀಯ ಭೂಕಂಪ ಏನಿದ್ದರೂ ಬೆಂಗಳೂರಿನಲ್ಲಿ: ಸತೀಶ್ ಜಾರಕಿಹೊಳಿ

ಮೈಸೂರು: ರಾಜಕೀಯ ಭೂಕಂಪ ಆಗುವುದಿದ್ದರೆ ಅದು ಬೆಂಗಳೂರಿನಲ್ಲಿ. ಬೆಳಗಾವಿಯಲ್ಲಿ ಅಂತಹ ಯಾವ ಘಟನೆಯೂ ‌ಸಂಭವಿಸುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಓಟದಿಂದ ನೀನು ಈಗಾಗಲೇ ಹೊರಬಂದು ವರ್ಷಗಳಾಗಿವೆ. ಯಾತಕ್ಕಾಗಿ ಎಂಬ ಕಾರಣ ಈಗ ಅಪ್ರಸ್ತುತ ಎಂದಿದ್ದಾರೆ.

ನಮ್ಮ ಪಕ್ಷದಲ್ಲಿ ಯಾವ ಕ್ರಾಂತಿಗಳೂ ನಡೆಯುತ್ತಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ತೀರ್ಮಾನ ಮಾಡುವುದು ನಾನಲ್ಲ. ಎಲ್ಲಾ ವಿಷಯಗಳಿಂದಲೂ ನಾವೀಗ ದೂರದಲ್ಲಿದ್ದೇವೆ. ಸಿಎಂ ಬದಲಾವಣೆಗೆ ಸಂಬಂಧಿಸಿದ ಹಾಗೆ ನೀವು ಸೂಕ್ತ ವ್ಯಕ್ತಿಯ ಜೊತೆ ಕೇಳಬೇಕು. ನಮ್ಮ ನಾಯಕ ಮುಖ್ಯಮಂತ್ರಿ ಆಗಬೇಕು ಎಂದು ಅವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದು ಅವರ ಅಭಿಪ್ರಾಯ ಅಷ್ಟೇ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





















































 
 
error: Content is protected !!
Scroll to Top