ಬೆಂಗಳೂರು: ನಗರದಲ್ಲಿನ ಕಸದ ಸಮಸ್ಯೆ, ರಸ್ತೆ ಗುಂಡಿಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅವ್ಯವಸ್ಥೆಗಳ ಬಗ್ಗೆ ಚೀನಾದ ಉದ್ಯಮಿಯೊಬ್ಬರ ಪ್ರಶ್ನೆಯನ್ನು ಉಲ್ಲೇಖ ಮಾಡಿ ಎಕ್ಸ್ ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವುದಾಗಿದೆ.
ಚೀನಾದ ಉದ್ಯಮಿಯೊಬ್ಬರು ಬಯೇಕಾನ್ ಪಾರ್ಕ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೆಂಗಳೂರು ನಗರದ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಕೇಳಿದ್ದರು. ಹೂಡಿಕೆಯನ್ನು ಬೆಂಬಲಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲವೇ? ಈ ವಿರುದ್ಧ ಉತ್ತಮ ಗಾಳಿ ಉಳ್ಳ ಭಾರತ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಎಂದು ಪ್ರಶ್ನೆ ಮಾಡಿದ್ದಾಗಿ ಅವರು ನುಡಿದಿದ್ದಾರೆ.
























