ಸಿಎಂ‌ ಸಿದ್ದುಗೆ ಪ್ರಿಯಾಂಕ್ ಖರ್ಗೆ ಪತ್ರದ ವಿಷಯ ನನಗೆ ಗೊತ್ತಿಲ್ಲ: ಡಾ. ಜಿ. ಪರಮೇಶ್ವರ್

ಬೆಂಗಳೂರು: RSS ಕಾರ್ಯಕ್ರಮಗಳನ್ನು ನಿಷೇಧ ಮಾಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿ ಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕುರಿತು ನನಗೆ ತಿಳಿದಿಲ್ಲ. ಆ ಪತ್ರ ಗೃಹ ಇಲಾಖೆಗೆ ಬಂದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಸರ್ಕಾರಿ ಪ್ರದೇಶ, ಶಾಲೆಗಳಲ್ಲಿ RSS ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಅವರು ಹೇಳಿದ್ದಾರಂತೆ‌. ಆದರೆ ಈ ಕುರಿತು ನನಗೆ ಮಾಹಿತಿ ಇಲ್ಲ. ಸಿಎಂ ಅಥವಾ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಚರ್ಚೆ ನಡೆಸಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎನ್ನುವುದಾಗಿ ಅವರು ತಿಳಿಸಿದ್ದಾರೆ.

RSS ಅಥವಾ ಅದರ ಘಟಕಗಳನ್ನು ನಿಷೇಧಿಸುವ ಬಗ್ಗೆ ಇಲಾಖೆಗೆ ವಿಚಾರಗಳು ಬಂದರೆ, ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು. ಅಲ್ಲದೆ ಈ ಬಗ್ಗೆ ವೈಯಕ್ತಿಕ ಅಭಿಪ್ರಾಯ ನೀಡಲು ಅಸಾಧ್ಯ ಎಂದಿದ್ದಾರೆ.





















































 
 
error: Content is protected !!
Scroll to Top