ಸುರಂಗ ನಿರ್ಮಾಣಕ್ಕೆ ಲಾಲ್‌ಭಾಗ್‍ ಭೂಮಿ ಬಳಕೆ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬೆಂಗಳೂರು: ವಿನಾಶಕ್ಕೆ ದಾರಿ ಮಾಡುವ ಸುರಂಗ ನಿರ್ಮಾಣಕ್ಕೆ ಲಾಲ್‌ಬಾಗ್‌ನ ಆರು ಎಕರೆ ಭೂಮಿಯಲ್ಲ, ಆರು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದ್ದಾರೆ.

ಈಗಾಗಲೇ ಪ್ರಸ್ತಾವನೆ ಮಾಡಿರುವ ಸುರಂಗ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಹಾಗೆ ಭೂ ಸ್ವಾಧೀನ ಮಾಡಲು ವಿರೋಧ ವ್ಯಕ್ತವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಹಾಗೆ ಭೂ ವೈಜ್ಞಾನಿಕ ವರದಿಯನ್ನು ಸಲ್ಲಿಕೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

ಸುರಂಗ ರ್ಯಾಂಪ್‌ಗಾಗಿ ಉದ್ಯಾನವನವನ್ನು ಗುರುತಿಸುವ ಮೊದಲು ವಾಕಿಂಗ್ ಇನ್ನಿತರ ಚಟುವಟಿಕೆಗೆ ಬಳಕೆ ಮಾಡುವ ಸಾರ್ವಜನಿಕರ ಜೊತೆಗೆ ಸಮಾಲೋಚನೆ ನಡೆಸದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಾಲ್‌ಬಾಗ್ ಜನರಿಗೆ ಸೇರಿದ್ದು. ಅದರ ವಿನಾಶಕ್ಕೆ ಕಾರಣವಾಗುವ ವಿವೇಚನಾರಹಿತ ಯೋಜನೆಗೆ ಲಾಲ್‌ಭಾಗ್‌ನ ಯಾವ ಭಾಗವನ್ನೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ತೇಜಸ್ವಿ ಸೂರ್ಯ ನುಡಿದಿದ್ದಾರೆ.





















































 
 
error: Content is protected !!
Scroll to Top