ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಮಾಸ್ಕ್ಮ್ಯಾನ್ ಚಿನ್ನಯ್ಯನ ಎರಡನೇ ಪತ್ನಿ SIT ಕಚೇರಿಗೆ ಇಂದು ಹಾಜರಾಗಿದ್ದಾರೆ.
ಅವರನ್ನು ಆರೋಪಿ ಚಿನ್ನಯ್ಯನಿಗೆ ಸಂಬಂಧಿಸಿದಂತೆ ಇರುವ ಮಾಹಿತಿಗಳನ್ನು ಸಂಗ್ರಹ ಮಾಡುವ ದೃಷ್ಟಿಯಿಂದ SIT ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಬಂಗ್ಲಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಚಿನ್ನಯ್ಯ ತೋರಿಸಿದ್ದ ಜಾಗದಲ್ಲಿ ಇತ್ತೀಚೆಗೆ ಮತ್ತೆ SIT ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ಹಾಗೆಯೇ ಅರಣ್ಯಾಧಿಕಾರಿಗಳ ಜೊತೆಗೂ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಕಾರ್ಯ ನಡೆಸಿದ್ದರು.
























