ಪುತ್ತೂರು: ಕಾವು ಮತ್ತು ಸುತ್ತ ಮುತ್ತಲಿನ ಗ್ರಾಮದ ವಿಶ್ವಕರ್ಮ ಸಮಾಜದ ಸೇವಾಕಾಂಕ್ಷಿಗಳ ಯುವಕರು “ವಿಶ್ವಕರ್ಮ ಮಿತ್ರ ಬಳಗ ಕಾವು” ಎಂಬ ಸಂಘಟನೆಗೆ ಸರಳ ಸಮಾರಂಭದ ಮೂಲಕ ಚಾಲನೆ ನೀಡಿದ್ದಾರೆ.
ನೂತನ ಸಂಘದ ಅಧ್ಯಕ್ಷರಾಗಿ ರವೀಂದ್ರ ಆಚಾರ್ಯ ಅರಿಯಡ್ಕ,ಉಪಾಧ್ಯಕ್ಷರಾಗಿ ಪ್ರಮೋದ್ ಆಚಾರ್ಯ ಮಾಣಿಯಡ್ಕ ಕಾವು, ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ, ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ಆಚಾರ್ಯ ಪೆರ್ಲಂಪಾಡಿ ,ಕೋಶಧಿಕಾರಿಯಾಗಿ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಮತ್ತು 15 ಜನರನ್ನು ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸಂಘಟನೆಯ ಮೂಲಕ ಸಮಾಜದ ಬಡವರ ಆರ್ಥಿಕ, ಸಾಮಾಜಿಕ ಮಟ್ಟವನ್ನು ಉತ್ತಮಗೊಳಿಸುವುದು, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು, ಆರೋಗ್ಯ ಶಿಬಿರಗಳಿಗೆ ಒತ್ತುಕೊಡುವುದು, ಧಾರ್ಮಿಕ-ಸಂಸ್ಕಾರ ,ವೈದಿಕ ಆಚರಣೆ, ಯುವಜನರಿಗೆ ಸಂಸ್ಕೃತಿ ತಿಳಿಸುವುದು ಹೀಗೆ ಮೌಲ್ಯಯುತ ಬದುಕಿಗೆ ಜಾಗೃತಿ ರೂಪಿಸುವುದು ಇವೇ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.
























