ನ. 15: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇದರ ವಾರ್ಷಿಕೋತ್ಸವ

ಪುತ್ತೂರು: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇದರ ವಾರ್ಷಿಕೋತ್ಸವ ಪಿಎಂಶ್ರೀ ಸಡಗರವು 15 ನವೆಂಬರ್ 2025 ರಂದು ನಡೆಯಲಿದ್ದು, ಆ ಪ್ರಯುಕ್ತ ಶಾಲಾ ಮಕ್ಕಳ ವಾರ್ಷಿಕ ಕ್ರೀಡಾಕೂಟ ನವೆಂಬರ್ 8, 2025 ರಂದು ನಡೆಯಲಿದೆ.

ಕ್ರೀಡಾಕೂಟದ ಉದ್ಘಾಟನೆಯನ್ನು ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ಅವರು ನಿರ್ವಹಿಸಲಿದ್ದಾರೆ. ಧ್ವಜವಂದನೆಯನ್ನು ಶಾರೀರಿಕ ಶಿಕ್ಷಣ ಇಲಾಖೆ ಪುತ್ತೂರಿನ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ಎ.ವಿ. ಸ್ವೀಕರಿಸಲಿದ್ದಾರೆ.

ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ
ನವೀನ್ ಡಿ (ಅಧ್ಯಕ್ಷರು ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘ (ನಿ)), ಹರೀಶ್ ಆಚಾರ್ಯ (ಅಧ್ಯಕ್ಷರು ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ(ರಿ) ವೀರಮಂಗಲ), ಉಮೇಶ್ ಪೂಜಾರಿ (ಅಧ್ಯಕ್ಷರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ವೀರಮಂಗಲ), ಭವಾನಿ ಕುಲಾಲ್ (ಅಧ್ಯಕ್ಷರು ವೈಷ್ಣವಿ ಮಹಿಳಾ ಮಂಡಲ ವೀರಮಂಗಲ), ದಿನೇಶ್ ಶೆಟ್ಟಿ (ಅಧ್ಯಕ್ಷರು ರಿಕ್ಷಾ ಚಾಲಕ ಮಾಲಕರ ಸಂಘ ವೀರಮಂಗಲ), ಬೆಳ್ಯಪ್ಪ ಗೌಡ (ಅಧ್ಯಕ್ಷರು ಕಟ್ಟೆ ಸಮಿತಿ ಆನಾಜೆ), ಅಶ್ರಫ್ ಕೈಮಾರ್ (ಅಧ್ಯಕ್ಷರು ರೈಸಿಂಗ್ ಸ್ಟಾರ್ ವೀರಮಂಗಲ), ಲಿಂಗಪ್ಪ ಗೌಡ ಆನಾಜೆ (ಮಾಜಿ ಎಸ್ ಡಿ ಎಂ ಸಿ ಸದಸ್ಯರು), ರಾಜ್‌ ಕುಮಾ‌ರ್ ರೈ ಬೆದ್ರಾಳ (ಎ ಗ್ರೇಡ್ ಕಂಟ್ರಾಕ್ಟರ್ ಬೆದ್ರಾಳ), ನಾರಾಯಣ ಅರಿಪೆಕಟ್ಟ (ನಿವೃತ್ತ ಪ್ರಬಂಧಕರು ಕೆನರಾ ಬ್ಯಾಂಕ್), ರಘುನಾಥ ನಾಯಕ್ ಬಲೆರಾವು (ನಿವೃತ್ತ ವಲಯ ಅರಣ್ಯ ಅಧಿಕಾರಿ), ಕೇಶವ ನಾಯಕ್ (ಮಾಲಕರು ಕಿರಣ್ ಎಂಟರ್‌ ಪೈಸಸ್ ದರ್ಬೆ ಪುತ್ತೂರು), ಸುರೇಶ್ ಕುಮಾರ್ ವೀರಮಂಗಲ (ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು), ಮಹಾಬಲ ಶೆಟ್ಟಿ (ನಿಕಟ ಪೂರ್ವ ಅಧ್ಯಕ್ಷರು ಹಿ.ವಿ ಸಂಘ ವೀರಮಂಗಲ), ಆನಂದ ಗೌಡ ಗುತ್ತು (ಮಾಜಿ ಅಧ್ಯಕ್ಷರು ಎಸ್ ಡಿಎಂ ಸಿ ವೀರಮಂಗಲ), ಮೇದಪ್ಪ ಗೌಡ ವೀರಮಂಗಲ (ನಿವೃತ್ತ ಸಿಬ್ಬಂದಿ ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘ), ಗಣೇಶ್ ಸಾಲ್ಯಾನ್ ದೋಳ (ಪ್ರಗತಿಪರ ಕೃಷಿಕರು), ಹಮೀದ್ (ಉದ್ಯಮಿಗಳು ವೀರಮಂಗಲ) ವಹಿಸಲಿದ್ದಾರೆ.





















































 
 

9 ನವೆಂಬರ್‌ 2025 ರಂದು ನಡೆಯುವ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ ಮತ್ತು ಸಮ್ಮಿಲನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ನೋಟರಿ ಹಿರಿಯ ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಭಾಗವಹಿಸಲಿದ್ದಾರೆ‌. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಎಸ್. ವೀರಮಂಗಲ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಸನ್ನ ಕುಮಾರ್ ಹೆಬ್ಬಾರ್ (ಸಹಾಯಕ ನಿರ್ದೇಶಕರು ಪಶುಸಂಗೋಪಣಾ ಇಲಾಖೆ), ಮಮತಾ ಶಂಕರ್ (ದೈಹಿಕ ಶಿಕ್ಷಣ ನಿರ್ದೇಶಕರು ಆನಂದತೀರ್ಥ ವಿದ್ಯಾಲಯ ಪಾಜಕ ಕುಜಾರುಗಿರಿ ಉಡುಪಿ), ಕರುಣಾಕರ ಕುಲಾಲ್ (ಮುಖ್ಯಾಧಿಕಾರಿಗಳು ವಿಟ್ಲ ಪಟ್ಟಣ ಪಂಚಾಯತ್), ಸೀತಾರಾಮ ಕೆ ಜಿ (ಮುಖ್ಯಗುರುಗಳು ಸ.ಹಿ.ಪ್ರಾ ಶಾಲೆ ಪಳ್ಳತ್ತಾರು), ಹರ್ಷ ಗುತ್ತು (ಮಾಜಿ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ ವೀರಮಂಗಲ), ಸುಲೈಮಾನ್ (ಪ್ರಗತಿಪರ ಕೃಷಿಕರು ವೀರಮಂಗಲ), ರಝಾಕ್ ಬಲೆರಾವು (ಉದ್ಯಮಿಗಳು ಅಬುದಾಬಿ) ಭಾಗವಹಿಸಲಿದ್ದಾರೆ.

15 ನವೆಂಬರ್ 2025 ರಂದು ನಡೆಯುವ ಧ್ವಜವಂದನಾ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ರವಿಚಂದ್ರ ಧ್ವಜಾರೋಹಣ ಮಾಡಲಿದ್ದಾರೆ. ಪುತ್ತೂರು ಶಿಕ್ಷಣ ಸಂಯೋಜಕರಾದ ಅಮೃತಕಲಾ ಬಹುಮಾನ ವಿತರಿಸಲಿದ್ದಾರೆ. ಪುತ್ತೂರು ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಅವರು ಸಾಂಸ್ಕೃತಿಕ ಕಾರ್ಯಕ್ರಮ ಶುಭಾರಂಭ ಮಾಡಲಿದ್ದಾರೆ. ಸಮೂಹ ಸಂಪನ್ಮೂಲ ವ್ಯಕ್ತಿ ನರಿಮೊಗರಿನ ಪರಮೇಶ್ವರಿ ಉಪಸ್ಥಿತರಿರಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಬು ಶೆಟ್ಟಿ (ಸದಸ್ಯರು ಗ್ರಾಮ ಪಂಚಾಯತ್, ನರಿಮೊಗರು), ಪದ್ಮಾವತಿ (ಸದಸ್ಯರು ಗ್ರಾಮ ಪಂಚಾಯತ್ ನರಿಮೊಗರು), ವಸಂತಿ (ಸದಸ್ಯರು ಗ್ರಾಮ ಪಂಚಾಯತ್, ನರಿಮೊಗರು), ನವೀನ್ ಭಂಡಾರಿ (ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಪುತ್ತೂರು), ವಿಷ್ಣುಪ್ರಸಾದ್ ಸಿ (ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಶಿಕ್ಷಣ ಇಲಾಖೆ ಪುತ್ತೂರು), ನವೀನ್ ಸ್ಟೀಫನ್ ವೇಗಸ್ (ಸಮನ್ವಯಾಧಿಕಾರಿಯವರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು), ಗೋಪಕುಮಾರ್ (ನಿವೃತ್ತ ರೈಲ್ವೆ ಇಂಜಿನಿಯರ್ ಆನಾಜೆ ವೀರಮಂಗಲ), ಶಿವರಾಮ ಭಟ್ ಭಾವ (ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲ), ರಝಾಕ್ ವಿ ಎಸ್, (ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸೀದಿ ವೀರಮಂಗಲ), ದಾಮೋದರ ಕುಲಾಲ್ (ಮಾಜಿ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ), ಬಾಬು ಪಳ್ಳತ್ತೋಡಿ (ಅಧ್ಯಕ್ಷರು ಶ್ರೀ ಆದಿ ನಾಗಬ್ರಹ್ಮ ಮುಗೆರ್ಕಳ ದೈವಸ್ಥಾನ) ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!
Scroll to Top