4 ತಿಂಗಳು ಜೀವನ್ಮರಣ ಹೋರಾಟ ನಡೆಸಿ ನಿಧನರಾದ ಅಪೂರ್ವ ಭಟ್‌ : ಕಂಬನಿ ಮಿಡಿದ ಪುತ್ತೂರಿನ ಜನ

ಮುರದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ಅಪೂರ್ವ ಭಟ್‌

ಪುತ್ತೂರು: ನಾಲ್ಕು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ‌ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಮಂಗಳವಾರ ರಾತ್ರಿ ನಿಧನರಾದರು. ಬರೋಬ್ಬರಿ 134 ದಿನ ಕೋಮಾದಲ್ಲಿದ್ದು ಜೀವನ್ಮರಣ ಹೋರಾಟ ನಡೆಸಿದ ಅಪೂರ್ವ ಭಟ್‌ ಅಗಲಿಕೆ ಭಾರಿ ದುಃಖ ತಂದಿದ್ದು, ಸಾವಿರಾರು ಮಂದಿ ಸೋಷಿಯಲ್‌ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

ಮೇ 27ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಈ ಅಪಘಾತ ನಡೆದಿತ್ತು. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ತಮ್ಮ ತಂದೆ ಈಶ್ವ‌ರ್ ಭಟ್ ಅವರ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಪಡ್ನರಿಗೆ ತಿರುಗುವ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಅಪೂರ್ವ ಅವರ ತಂದೆ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನಜ್ಜುಗುಜ್ಜಾಗಿತ್ತು.





















































 
 

ಅಪಘಾತದಲ್ಲಿ ಅಪೂರ್ವ, ಅವರ ತಂದೆ ಈಶ್ವ‌ರ್ ಭಟ್ ಮತ್ತು ಅಪೂರ್ವ ಅವರ ಪುಟ್ಟ ಮಗಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದರು. ತಂದೆ ಮತ್ತು ಮಗಳು ಚೇತರಿಸಿಕೊಂಡರಾದರೂ, ಅಪೂರ್ವ ಅವರ ಸ್ಥಿತಿ ಗಂಭೀರವಾಗಿತ್ತು. 134 ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಪೂರ್ವ ಅವರ ಪತಿ ಆಶಿಶ್‌ ಸಾರಡ್ಕ ಪತ್ನಿ ಚೇತರಿಸಿಕೊಳ್ಳಲೆಂದು ನಾಲ್ಕು ತಿಂಗಳ ಕಾಲ ಅವಿರತವಾಗಿ ಶ್ರಮಿಸಿದ್ದರು. ಅಪೂರ್ವ ಚೇತರಿಕೆಗಾಗಿ ಅನೇಕ ಪೂಜೆ, ಪ್ರಾರ್ಥನೆಗಳು ಕೂಡ ನಡೆದಿದ್ದವು. ಪತ್ನಿಯ ಚಿಕಿತ್ಸೆಗಾಗಿ ಅವರು ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶೀಫ್ಟ್‌ ಮಾಡಿದ್ದರು. ಆದರೆ ವಿಧಿಯಾಟದ ಮುಂದೆ ಅವರ ಎಲ್ಲ ಪ್ರಯತ್ನಗಳು ಸೋತುಹೋಗಿವೆ. ಅರುಣ್‌ ಪುತ್ತಿಲ ಸಹಿತ ಅನೇಕ ಗಣ್ಯರು ಅಪೂರ್ವ ಭಟ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top