ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ

ಹುಡುಗಿಯರೊಂದಿಗೆ ಅನುಚಿತ ವರ್ತನೆ ಆರೋಪಿಸಿ ವ್ಯಕ್ತಿ ಮೇಲೆ ಹಲ್ಲೆ

ಮಂಗಳೂರು: ಬಸ್ಸಿನಲ್ಲಿ ಬಾಲಕಿಯರ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ. ಕಟ್ಟಡ ಕಾರ್ಮಿಕ ಇಸಾಕ್ (43) ಎಂಬವರು ಹಲ್ಲೆಗೊಳಗಾದವರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ
ಬಿ ಮೂಡ ಗ್ರಾಮದ ನಿವಾಸಿಯಾಗಿರುವ ಇಸಾಕ್ ಬುಧವಾರ ಬೆಳಗ್ಗೆ ಮೂಡುಬಿದಿರೆಯಿಂದ ಕೆಲಸಕ್ಕೆ ತೆರಳಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ನನ್ನ ಹತ್ತಿರ ಬಂದು ಬಸ್‌ನಲ್ಲಿದ್ದ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಿ ಆರೋಪಿಸಿ ನಿಂದಿಸಿದರು. ಬಳಿಕ ಚಲಿಸುತ್ತಿದ್ದ ಬಸ್‌ನಿಂದ ತಳ್ಳಲು ಯತ್ನಿಸಿದ. ಈ ವೇಳೆ ಚಾಲಕ ಬಸ್ ನಿಲ್ಲಿಸಿದರು. ನಂತರ ಆತನೊಂದಿಗೆ ಇನ್ನಿಬ್ಬರು ಸೇರಿಕೊಂಡು ಹಲ್ಲೆ ನಡೆಸಿದರು. ನಂತರ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗಿ ದೊಣ್ಣೆಗಳಿಂದ ಥಳಿಸಿ ಕೊಲೆ ಬೆದರಿಕೆ ಹಾಕಿದರು. ಈ ವೇಳೆ ಸ್ಥಳದಲ್ಲಿ ಜನರು ಸೇರಲು ಆರಂಭಿಸಿದಾಗ, ಅಲ್ಲಿಂದ ಪರಾರಿಯಾದರು ಎಂದು ದೂರಿನಲ್ಲಿ ಇಸಾಕ್ ಹೇಳಿಕೊಂಡಿದ್ದಾರೆ.
ನಂತರ ಮನೆಗೆ ತೆರಳಿದ ಐಸಾಕ್ ಅವರನ್ನು, ಗುರುವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ನಾಲ್ಕನೇ ನೈತಿಕ ಪೊಲೀಸ್‌ಗಿರಿ ಪ್ರಕರಣ ಇದಾಗಿದೆ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top