ಕತ್ತು ಹಿಸುಕಿ ಮಗಳನ್ನೇ ಕೊಂದ ತಾಯಿ

ಕಾರ್ಕಳ : ಮಗಳನ್ನೇ ತಾಯಿ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಕಾರ್ಕಳದ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ವರದಿಯಾಗಿದೆ.

ಮೃತಳನ್ನು 17 ವರ್ಷದ ಶಿಫನಾಜ್‌ ಎಂದು ಗುರುತಿಸಲಾಗಿದೆ. ಸೆ. 20ರಂದು ಶಿಫನಾಜ್‌ ತನ್ನ ಗೆಳೆಯನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿದ್ದಾಳೆ. ಅದಕ್ಕೆ ತಾಯಿ ಗುಲ್ಜಾರ್‌ ಬಾನು (45) ನಿರಾಕರಿಸಿದ್ದಾರೆ. ಇದರಿಂದ ತಾಯಿ ಮತ್ತು ಮಗಳ ನಡುವೆ ಜಗಳ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ.

ಶಿಫನಾಜ್‌ ಸೆ. 20ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಶಿಫನಾಜ್‌ ತಂದೆ ಶೇಖ್‌ ಮುಸ್ತಾಫ್‌ ದೂರು ನೀಡಿದ್ದು, ಶಿಫನಾಜ್‌ ಆಕೆಯ ಸ್ನೇಹಿತ ಮಹಮ್ಮದ್‌ ಸಲೀಂನನ್ನು ಉಡುಪಿಯಲ್ಲಿ ಭೇಟಿಯಾಗಲು ಹೋಗುವುದಾಗಿ ತಾಯಿಯಲ್ಲಿ ಹೇಳಿರುತ್ತಾಳೆ. ಈ ವಿಚಾರವಾಗಿ ತಾಯಿ ಮಗಳ ಮಧ್ಯೆ ಜಗಳವಾಗಿದ್ದು ಕೋಪಗೊಂಡ ಶಿಫನಾಜ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.





















































 
 

ಶಿಫನಾಜ್‌ ಸಾವು ಆತ್ಮಹತ್ಯೆಯಲ್ಲ. ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವರದಿ ಪೋಸ್ಟ್‌ ಮಾರ್ಟಂ ತಿಳಿದುಬಂತು. ಸಾವಿನ ಸತ್ಯ ಸಂಗತಿ ಪೋಸ್ಟ್‌ ಮಾರ್ಟಂನಿಂದ ಬಹಿರಂಗಗೊಳ್ಳುತ್ತಿದ್ದಂತೆ ಗುಲ್ಜಾರ್‌ ಬಾನಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ತಾನು ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾಳೆ. ಅ. 2ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಆರೋಪಿ ಜೈಲು ಸೇರಿದ್ದಾಳೆ.

error: Content is protected !!
Scroll to Top