ವಿದೇಶದಲ್ಲಿ ನಿಂತು ಭಾರತ, RSS ವಿರುದ್ಧ ನಾಲಿಗೆ ಹರಿಯಬಿಟ್ಟ ರಾಹುಲ್ ಗಾಂಧಿ

ನವದೆಹಲಿ: ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ಟೀಕೆ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಿವಾದ ಸೃಷ್ಟಿ ಮಾಡಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಪ್ರಜಾಪ್ರಭುತ್ವದ ಮೇಲೆ ತೀವ್ರ ದಾಳಿ ನಡೆಸುತ್ತಿದ್ದು, ಇದು ದೇಶಕ್ಕೆ ಎದುರಾಗಿರುವ ಬಹುದೊಡ್ಡ ಬೆದರಿಕೆ ಎಂದು ನಾಲಿಗೆ ಹರಿಯ ಬಿಟ್ಟಿದ್ದು, ಆ ಮೂಲಕ ಭಾರತೀಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಭಾರತದ ವ್ಯವಸ್ಥೆಯಲ್ಲಿ ಹಲವಾರು ಸಮಸ್ಯೆಗಳಿವೆ. ಈ ಅಪಾಯಗಳಿಂದ ದೇಶ ಹೊರಬರಬೇಕಿದೆ. ಅದರಲ್ಲಿ ಬಹು ದೊಡ್ಡ ಸಮಸ್ಯೆ ದೇಶದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿ ಎಂದು ಹೇಳಿದ್ದಾರೆ.





















































 
 

ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು ಈ ಎರಡರ ಹೃದಯದಲ್ಲೂ ಹೇಡಿತನವಿದೆ. ಸಾವರ್ಕರ್ ಅವರು ತಾನು ಮತ್ತು ತನ್ನ ಸ್ನೇಹಿತರು ಮುಸ್ಲಿಂ ಯುವಕನನ್ನೊಬ್ಬನನ್ನು ಥಳಿಸಿದ್ದೆವು. ಇದು ಖುಷಿ ನೀಡಿತ್ತು ಎಂದು ಪುಸ್ತಕವೊಂದರಲ್ಲಿ ಬರೆದಿದ್ದರು. ಇದು ಹೇಡಿತನವಲ್ಲವೇ. ದುರ್ಬಲರನ್ನು ಥಳಿಸುವುದು ಆರ್‌ಎಸ್‌ಎಸ್ ಸಂಸ್ಕೃತಿ ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

error: Content is protected !!
Scroll to Top