ನವದೆಹಲಿ: ಭಾರತದ ಮೇಲೆ ರಷ್ಯಾದಿಂದ ಕಚ್ಚಾ ತೈಲ ವ್ಯಾಪಾರ ವಹಿವಾಟು ಸ್ಥಗಿತ ಮಾಡುವಂತೆ ಅಮೆರಿಕಾ ಒತ್ತಡ ಹೇರುತ್ತಿದ್ದು, ಇದನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಖಂಡಿಸಿದ್ದಾರೆ.
ಭಾರತ ಅಂತಹ ಒತ್ತಡಗಳಿಗೆ ಎಂದಿಗೂ ಮಣಿಯಲು ಸಾಧ್ಯವಿಲ್ಲ. ಹಾಗೆಯೇ ಭಾರತವನ್ನು ಯಾರ ಮುಂದೆಯೂ ಅವಮಾನಕ್ಕೆ ಒಳಗಾಗುವಂತೆ ಮಾಡಲು ರಷ್ಯಾ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದು ಆರ್ಥಿಕ ಲೆಕ್ಕಾಚಾರ ಅಷ್ಟೇ. ಇದರಲ್ಲಿ ರಾಜಕೀಯ ಇಲ್ಲ. ಭಾರತ ನಮ್ಮ ಇಂಧನ ಲೆಕ್ಕಾಚಾರಗಳನ್ನು ನಿರಾಕರಿಸಿದರೆ ಅದರಿಂದ ಕೆಲವು ನಷ್ಟಗಳಾಗುತ್ತವೆ. ಅಂದಾಜುಗಳು ಬದಲಾಗುತ್ತವೆ ಎಂದು ಅವರು ಹೇಳಿದ್ದಾರೆ.
























