ಮೈಸೂರು ದಸರಾ ಅದ್ದೂರಿಯಾಗಿ ಸಂಪನ್ನ

ವಿಶ್ವ ವಿಖ್ಯಾತ ಜಂಬೂ ಸವಾರಿ ಅತ್ಯಂತ ಯಶಸ್ವಿ; ಮೆರುಗು ನೀಡಿದ ಡ್ರೋನ್‌ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅದ್ದೂರಿಯಾಗಿ ಮುಕ್ತಾಯವಾಗಿದೆ. 6ನೇ ಬಾರಿಗೆ ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ್ದು, ಎಲ್ಲ ಕಾರ್ಯಗಳು ಅಭೂತಪೂರ್ವ ಯಶಸ್ಸು ಕಂಡಿವೆ.

415ನೇ ದಸರಾ ಮಹೋತ್ಸವದ ಎಲ್ಲ ಕಾರ್ಯಗಳಿಗೆ ವಿಧ್ಯುಕ್ತವಾಗಿ ತೆರೆ ಬಿದ್ದಿದ್ದು, ಎಲ್ಲವೂ ಸಾಂಪ್ರದಾಯಿಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡು ಕಳೆದ 11 ದಿನಗಳಿಂದ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂಪನ್ನವಾಗಿದೆ. ಸೆ.22ರಂದು ವಿಜೃಂಭಣೆಯಿಂದ ಆರಂಭಗೊಂಡಿದ್ದ ದಸರಾ ಅನೇಕ ಅದ್ದೂರಿ ಕಾರ್ಯಕ್ರಮಗಳೊಂದಿಗೆ ಸಾಗಿ, ಯಶಸ್ವಿ ಜಂಬೂಸವಾರಿಯೊಂದಿಗೆ ತೆರೆ ಬಿದ್ದಿದೆ.





















































 
 

ಗುರುವಾರ ವಿಜಯದಶಮಿ ಹಿನ್ನೆಲೆ ಮಧ್ಯಾಹ್ನ 12 ಗಂಟೆಗೆ ಬನ್ನಿ ಪೂಜೆಯೊಂದಿಗೆ ಅರಮನೆ ದಸರಾ ಮುಕ್ತಾಯವಾಯಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜ ಪೂಜೆಯ ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಲಾ ತಂಡಗಳು ಮತ್ತು ಆನೆ ಮೆರವಣಿಗೆ ಬಳಿಕ 4.41ಕ್ಕೆ ಸಿಎಂ ಮತ್ತು ಗಣ್ಯರು ಜಂಬೂಸವಾರಿಗೆ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಯಶಸ್ವಿಯಾಗಿ ಜಂಬೂಸವಾರಿ ಹೊತ್ತು ತನ್ನ ಜವಾಬ್ದಾರಿ ಮೆರೆದ.

ಜಂಬೂಸವಾರಿ ಬಳಿಕ ಬನ್ನಿಮಂಟಪ ಮೈದಾನದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ರಾಜ್ಯಪಾಲರು, ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಕೂಡ ದಸರಾ ಮುಕ್ತಾಯ ಪಂಜಿನ ಮೆರವಣಿಗೆಯಲ್ಲಿ ಭಾಗಿಯಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾರ್ಯಕ್ರಮ ಅಶ್ವದಳ ತಂಡದ ಸಾಹಸ ಪ್ರದರ್ಶನ ಮೈನವಿರೆಳುಸುವಂತಿತ್ತು. ಬಳಿಕ ಅಂತಿಮ ಡ್ರೋಣ್ ಶೋ ನೆರೆದಿದ್ದವರ ಕಣ್ಮನ ತಣಿಸಿತು. ಕೊನೆಯಲ್ಲಿ ಪೊಲೀಸ್ ತಂಡ, ರೈಲ್ವೆ ತಂಡಗಳಿಂದ ಮೂಡಿಬಂದ ಪಂಜಿನ ಕವಾಯತು ಮತ್ತಷ್ಟು ರಂಜಿಸಿತು. ಈ ಮೂಲಕ 2025ರ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿತ್ತು. ಮುಂದಿನ ನಾಲ್ಕೈದು ದಿನ ನಗರದಲ್ಲಿ ದಸರಾ ಕಲರವ ಮುಂದುವರಿಯಲಿದೆ. ಲೈಟಿಂಗ್ ಸೇರಿದಂತೆ ಹಲವು ಕಾರ್ಯಗಳು ಈ ವಾರ ಪೂರ್ತಿ ಮುಂದುವರಿಯಲಿದೆ.

error: Content is protected !!
Scroll to Top