ಸುಳ್ಯ : ಅಡ್ಡ ಬಂದ ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನೇರವಾಗಿ ಅಂಗಡಿಯೊಳಗೆ ಘಟನೆ ಸುಳ್ಯ ಅಂಬೆಟಡ್ಕದಲ್ಲಿ ನಿನ್ನೆ ಸಂಭವಿಸಿದೆ. ಕೆರ್ಪಳ ಹೇಮನಾಥ್ ಎಂಬವರು ಚಲಾಯಿಸುತ್ತಿದ್ದ ಕಾರು ಎನ್ನಲಾಗಿದ್ದು, ಕಾರು ನುಗ್ಗಿ ಬಂದ ಟೈಲರ್ ಅಂಗಡಿಯ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳಿಗೆ ಸಂಪೂರ್ಣ ಹಾನಿಯಾಗಿದೆ.
ಮಧ್ಯಾಹ್ನದ ವೇಳೆ ಊಟದ ಸಮಯವಾದ ಕಾರಣ ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳದಲ್ಲಿ ಹೆಚ್ಚಿನ ಜನರು ಸೇರಿ ಕಾರನ್ನು ಹೊರ ತೆಗೆಯುವಲ್ಲಿ ಸಹಕರಿಸಿದರು.

