ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್. (ರಿ)ಉಪ್ಪಿನಂಗಡಿ ಸುವರ್ಣಮಹೋತ್ಸವ ವರ್ಷ 2025 ಪ್ರಯುಕ್ತ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನವರಾತ್ರಿಯ ಸಾಂಸ್ಕೃತಿಕ ಉತ್ಸವದ ಅಂಗವಾಗಿ
ದಿನಾಂಕ 25.09.2025 ರಂದು ಶ್ರೀ ಮಹಾಭಾರತ ಸರಣಿಯಲ್ಲಿ 99 ನೇ ತಾಳಮದ್ದಳೆ ಘೋರ ಭೀಷಣ ಕಾಳಗ ತಾಳಮದ್ದಳೆ ಜರಗಿತು
ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪ್ರಕಾಶ ಅಭ್ಯಂಕರ್ ಬೆಳ್ತಂಗಡಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಶ್ರೀ ಅರ್ಜುನ ಅಭ್ಯಂಕರ್ ಬೆಳ್ತಂಗಡಿ, ಅರ್ಥದಾರಿಗಳಾಗಿ ದಿವಾಕರ ಆಚಾರ್ಯ, ಗೇರುಕಟ್ಟೆ(ಅರ್ಜುನ)ಪಾತಾಳ ಅಂಬಾ ಪ್ರಸಾದ್ (ಮೇದೋಹೋತ), ಸತೀಶ ಶಿರ್ಲಾಲು (ಘೋರಭೀಷಣ), ಶ್ರುತಿ ವಿಸ್ಮಿತ್(ಯೋಜನಸ್ತನಿ), ಗೀತಾ ಕುದ್ದಣ್ಣಾಯ, ಕರಾಯ(ಹನುಮಂತ)ಭಾಗವಹಿಸಿದ್ದರು.
ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಘವ ಗೇರುಕಟ್ಟೆ, ಸಂಜೀವ ಪಾರೆಂಕಿ, ಭಾಗವತ ದಿನಕರ ಕಾವಲಕಟ್ಟೆ ಕಲಾವಿದರನ್ನು ಗೌರವಿಸಿದರು. ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
























