ಭಾರತದ ಮೇಲೆ ಟ್ರಂಪ್‌ ಇನ್ನೊಂದು ಸುಂಕ ಪ್ರಹಾರ

ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಮೇಲೆ ಶೇ.100 ಸುಂಕ

ವಾಷಿಂಗ್ಟನ್ : ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮತ್ತೊಂದು ಸುಂಕ ದಾಳಿ ನಡೆಸಿದ್ದಾರೆ. ಅಮೆರಿಕಕ್ಕೆ ಪ್ರವೇಶಿಸುವ ಭಾರತದ ಎಲ್ಲ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳು ಶೇ.100 ಸುಂಕಕ್ಕೆ ಒಳಪಡುತ್ತವೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಸುಂಕ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಆದರೆ ಔಷಧ ಕಂಪನಿಗಳು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕ ಸ್ಥಾಪಿಸಿದರೆ ಸುಂಕ ಅನ್ವಯಿಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಇದನ್ನು ಘೋಷಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಅವರು ಅಡುಗೆ ಮನೆ ಕ್ಯಾಬಿನೆಟ್‌ಗಳು, ಸ್ನಾನಗೃಹದ ವ್ಯಾನಿಟಿಗಳು ಮತ್ತು ಸಂಬಂಧಿತ ವಸ್ತುಗಳ ಮೇಲೆ ಶೇ.50 ಸುಂಕ ಮತ್ತು ಭಾರಿ ಟ್ರಕ್‌ಗಳ ಮೇಲೆ ಶೇ.25 ಸುಂಕವನ್ನು ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಆಮದು ಶುಲ್ಕವನ್ನು ಶೇ.25ರಿಂದ 50ಕ್ಕೆ ಏರಿಸಿದ್ದರು.





















































 
 

ಈ ಘೋಷಣೆಯಿಂದ ಭಾರತೀಯ ಔಷಧ ಕಂಪನಿಗಳಿಗೆ ದೊಡ್ಡ ಹಿನ್ನಡೆಯಾಗಲಿದೆ. ಅಮೆರಿಕ ಭಾರತದ ಅತಿದೊಡ್ಡ ಔಷಧ ರಫ್ತು ಮಾರುಕಟ್ಟೆಯಾಗಿದೆ. ಅಮೆರಿಕದಲ್ಲಿ ಕೈಗೆಟುಕುವ ಬೆಲೆಯ ಭಾರತದ ಜೆನೆರಿಕ್ ಔಷಧಿಗಳಿಗೆ ಭಾರಿ ಬೇಡಿಕೆಯಿದೆ.

2024ರಲ್ಲಿ ಭಾರತವು ಅಮೆರಿಕಕ್ಕೆ 3.6 ಬಿಲಿಯನ್ ಡಾಲರ್ (ಸುಮಾರು ರೂ. 31,626 ಕೋಟಿ) ಮೌಲ್ಯದ ಔಷಧಿಗಳನ್ನು ರಫ್ತು ಮಾಡಿತ್ತು. ಆದರೆ 2025ರ ಮೊದಲಾರ್ಧದಲ್ಲಿ ರಫ್ತು 3.7 ಬಿಲಿಯನ್ ಡಾಲರ್ (ಸುಮಾರು ರೂ. 32,505 ಕೋಟಿ) ತಲುಪಿತ್ತು.

ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಸನ್ ಫಾರ್ಮಾ, ಲುಪಿನ್ ಮತ್ತು ಅರಬಿಂದೊ ಫಾರ್ಮಾದಂತಹ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ಕಂಪನಿಗಳ ಆದಾಯದ ಗಮನಾರ್ಹ ಭಾಗವು ಅಮೆರಿಕದಿಂದ ಬರುತ್ತಿದೆ ಮತ್ತು ಸುಂಕಗಳು ಅವುಗಳ ವೆಚ್ಚವನ್ನು ದ್ವಿಗುಣಗೊಳಿಸಬಹುದು.

error: Content is protected !!
Scroll to Top