ಕಡಬ: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ, ಮಂಗಳೂರು ಕಾವೂರು ಶಾಖಾ ಮಠದ ಬಿಜಿಎಸ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ವಿಭಾಗದ 2025 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಕಡಬ ತಾಲೂಕಿನ ದ.ಕ.ಜಿ. ಪಂ.ಹಿ ಪ್ರಾ. ಶಾಲೆ ಗೋಳಿಯಡ್ಕ, ರೆಂಜಿಲಾಡಿಯಲ್ಲಿ, 23-09-2025 ರಂದು ಅಪರಾಹ್ನ 2.30ಕ್ಕೆ ನಡೆಯಿತು, ವಾರ್ಷಿಕ ವಿಶೇಷ ಶಿಬಿರವನ್ನು ರೆಂಜಿಲಾಡಿ ಬೀಡಿನ ಅರಸರಾದ ಶ್ರೀ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಾವತಿ ವಹಿಸಿದ್ದರು.

ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಆನಂದ ಗೌಡ, ಶ್ರೀ ಕೃಷ್ಙ ಇಲೆಕ್ಟ್ರಿಕಲ್ಸ್ ನ ಮಾಲಕರಾದ ಶ್ರೀ ಅಭಿಲಾಶ್ ಪಿ.ಕೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮೇದಪ್ಪ ಗೌಡ ಎ, ಶ್ರೀ ಮಹಾವೀರ್ ಜೈನ್ ಡೆಪ್ಪುಣಿ ಗುತ್ತು, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಇಮ್ಯಾನುವೆಲ್ ಪಿ.ಜೆ, ಶ್ರೀಧರ ಗೌಡ ಗೋಳ್ತಿಮಾರು,ಬಿಜಿಎಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಸುಬ್ಬ ಕಾರಡ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಗದೀಶ್ ಬಿ. ಉಪಾಧ್ಯಕ್ಷರಾದ ಶ್ರೀಮತಿ ಪದ್ಮಾಪ್ರಿಯ, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೂಡು, ಕುಸಲ್ದ ಜವನೆರ್ ಸಂಘದ ಉಪಾಧ್ಯಕ್ಷರಾದ ಶ್ರೀ ವೆಂಕಟೇಶ್ ಪಾಡ್ಲ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವ್ಯವಸ್ಥಾಪಕರಾದ ಶ್ರೀ ಅಶೋಕ್ ಶೇಡಿ, ಶ್ರೀ ದುರ್ಗಾಪ್ರಸಾದ್ ಕೆ.ಪಿ ಸಿವಿಲ್ ಕಾಂಟ್ರ್ಯಾಕ್ಟರ್, ಪ್ರಮುಖರಾದ ಶ್ರೀ ಅನಿಲ್ ಕೆರ್ನಡ್ಕ, ಶ್ರೀ ಜಯಪ್ರಕಾಶ್ ಪೆತ್ತಲ, ಶ್ರೀ ಜನಾರ್ಧನ ಪಾಡ್ಲ, ಶ್ರೀ ಜನಾರ್ಧನ ಖಂಡಿಗ, ಶ್ರೀ ಧರ್ಮಪಾಲ ಗೌಡ, ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿ ಪೋಷಕರು, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ, ಸಹ ಯೋಜನಾಧಿಕಾರಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಪ್ರಸ್ತಾವನೆಗೈದರು, ಶಿಬಿರಾರ್ಥಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು
























