ಬಾರ್ಯ ದೇವಸ್ಥಾನದಲ್ಲಿ ತೆನೆ ಹಬ್ಬ.ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 9 ದಿನಗಳ ಪರ್ಯಂತ ನವದುರ್ಗೆಯರ ಆರಾಧನೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ದೇವಳದ ಮತ್ತು ಪರಿವಾರದೈವಗಳ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ನೆರವೇರಿಸಿದರು.
ನವರಾತ್ರಿ ಪ್ರಥಮ ದಿನದಂದು ಗ್ರಾಮಸ್ಥರಿಗೆ ತೆನೆಯನ್ನು ವಿತರಿಸಲಾಯಿತು. ದೇವಳದ ಅರ್ಚಕ ಗುರುಪ್ರಸಾದ್ ನೂರಿತ್ತಾಯ,, ಆಡಳಿತ ಟ್ರಸ್ಟ್ ಕಾರ್ಯದರ್ಶಿ ಪ್ರಶಾಂತ್ ಪೈ ಬಾರ್ಯ ಮತ್ತು ಟ್ರಸ್ಟಿಗಳು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು

