ಪುತ್ತೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಪುತ್ತೂರು ಜಿ. ಎಸ್.ಬಿ ಮಹಿಳಾ ಮಂಡಳಿ ಸಹಯೋಗದೊಂದಿಗೆ ಸುಕೃತಿಂದ್ರ ಕಲಾಮಂದಿರದಲ್ಲಿ ಜರುಗಿದ ಸಾಹಿತ್ಯ ಸಂಭ್ರಮ- 3 ಮತ್ತು ಕೊಂಕಣಿರಂಗ ತರಂಗ ಕಾರ್ಯಕ್ರಮದಲ್ಲಿ ಖ್ಯಾತ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ ಅವರನ್ನು ಗೌರವ ಸನ್ಮಾನ ಮಾಡಲಾಯಿತು.
ಕೊಂಕಣಿ ಭಾಷಾ ಮಕ್ಕಳ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ, ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಆಲ್ವಾರಿಸ್ ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾಕ್ಟರ್ ಅಶೋಕ್ ಪ್ರಭು, ಇತಿಹಾಸ ತಜ್ಞ ಡಾ. ವೈ. ಉಮಾನಾಥ ಶೆಣೈ, ಎಂ. ವಿದ್ಯಾಭಟ್, ಅಕಾಡೆಮಿ ಸದಸ್ಯರಾದ ಸಮರ್ಥ್ ಭಟ್, ನವೀನ ಲೋಬೊ ಮೊದಲಾದವರು ಉಪಸ್ಥಿತರಿದ್ದರು.
























