ಅತೀ ಹೆಚ್ಚು ಅಡಿಕೆ ಖರೀದಿ ಮಾಡಿರುವ ಸಾಧನೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರುಗೆ ಗೌರವಾರ್ಪಣೆ

ಪುತ್ತೂರು: ಅತೀ ಹೆಚ್ಚು ಅಡಿಕೆ ಖರೀದಿ ಮಾಡಿರುವ ಸಾಧನೆಗಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸವಣೂರು ಗೆ ಮಂಗಳೂರಿನ ಬೈಕಂಪಾಡಿಯಲ್ಲಿ ಸೀತಾರಾಮ ರೈ ಸವಣೂರು ರವರ ಅಧ್ಯಕ್ಷತೆಯಲ್ಲಿ ಬರುಗಿದ ಮಾನ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.

ಸವಣೂರು ಮಾನ್ ಅಡಿಕೆ ಖರೀದಿ ಕೇಂದ್ರಕ್ಕೆ ಅಡಿಕೆ ಮಾರಾಟ ಮಾಡಿ ಈ ಸಾಧನೆಗೆ ಕಾರಣಕರ್ತರಾಗಿರುವ ಅಡಿಕೆ ಬೆಳೆಗಾರರ ಪರವಾಗಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ರವರಿಗೆ ಸನ್ಮಾನಿಸಲಾಯಿತು.

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕೋಡಿಬೈಲು, ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ಸವಣೂರು ಮಾನ್ ಶಾಖೆ ಅಡಿಕೆ ಖರೀದಿ ಕೇಂದ್ರದ ಶಾಖಾ ಮೇನೇಜರ್ ಯತೀಶ್ ಉಪಸ್ಥಿತರಿದ್ದರು.





















































 
 
error: Content is protected !!
Scroll to Top