ಸೆ. 27-28: ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಮೈಸೂರು ವಿಭಾಗೀಯ ಮಟ್ಟದ ಕಬಡ್ಡಿ

ಪುತ್ತೂರು: ಕಡಬ ತಾಲೂಕಿನ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ (ರಿ.) ರಾಮಕುಂಜೇಶ್ವರ ಆಶ್ರಯದಲ್ಲಿ 14 – 17 ರ ವಯೋಮಾನದ ಬಾಲಕರು ‌ಮತ್ತು ಬಾಲಕಿಯರ ಮೈಸೂರು ವಿಭಾಗೀಯ ಮಟ್ಟದ ಕಬಡ್ಡಿ ಪಂದ್ಯಾಟ 2025 ಸೆ. 27 ಮತ್ತು 28 ರಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ರಾಮಕುಂಜದಲ್ಲಿ ‌ನಡೆಯಲಿದೆ.

ಸೆ. 27 ರಂದು ಸಂಜೆ ಗಂಟೆ 6 ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟದಲ್ಲಿ ಶೈಕ್ಷಣಿಕ, ಕೃಷಿ, ಆಹಾರ, ವಾಣಿಜ್ಯ, ವಿಜ್ಞಾನ ಮೇಳಗಳ ಜೊತೆಗೆ ಸುಮಾರು 100 ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲು ಅವಕಾಶ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯನ್ನು ಸಂಪರ್ಕಿಸಬಹುದಾಗಿದೆ.





















































 
 
error: Content is protected !!
Scroll to Top