ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಪುನರಾರಂಭ

ಶ್ರೀನಗರ: ನಿರಂತರವಾದ ಮಳೆ, ಭೂಕುಸಿತ ಕಾರಣದಿಂದ ಸ್ಥಗಿತವಾಗಿದ್ದ ವೈಷ್ಣೋದೇವಿ ಯಾತ್ರೆಯನ್ನು 22 ದಿನಗಳ ಬಳಿಕ ಈಗ ಮತ್ತೆ ಆರಂಭ ಮಾಡಲಾಗಿದೆ.

ಈ ಸಂಬಂಧ ಶ್ರೀ ಮಾತಾ ವೈಷ್ಣೋದೇವಿ ಯಾತ್ರಾ ಮಂಡಳಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಯಾತ್ರಾ ಪ್ರದೇಶದಲ್ಲಿ ಪರಿಸ್ಥಿತಿ ಸುಧಾರಣೆ ಕಂಡಲ್ಲಿ ಯಾತ್ರಾ ಮಾರ್ಗವನ್ನು ಮುಕ್ತಗೊಳಿಸುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ.

ಆ. 26 ರಂದು ಇಂದ್ರಪ್ರಸ್ಥದ ಭೋಜಶಾಲ ಬಳಿ ಭೂ ಕುಸಿತ ನಡೆದಿತ್ತು. ಆ ಬಳಿಕ ಯಾತ್ರೆಯನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ಸುಮಾರು 34 ಜನರು ಭೂಕುಸಿತದಲ್ಲಿ ಮೃತಪಟ್ಟಿದ್ದರು.





















































 
 

error: Content is protected !!
Scroll to Top