ವಿಠಲ ಗೌಡ ತಲೆಬುರುಡೆ ಅಡಗಿಸಿಟ್ಟ ಸ್ಥಳದ ಮಹಜರು ಮಾಡಲಿರುವ ಎಸ್‌ಐಟಿ
ಧರ್ಮಸ್ಥಳ : ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪ ಸಂಬಂಧ ಸ್ಥಳ ಮಹಜರು ನಡೆಸಲು ಎಸ್ಐಟಿಗೆ ಅರಣ್ಯ ಇಲಾಖೆ ಹಸಿರು ನಿಶಾನೆ ತೋರಿದೆ.
ಬಂಗ್ಲೆಗುಡ್ಡೆಯಲ್ಲಿ ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್‌ಐಟಿ ಮಹಜರು ನಡೆಸಲಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದ್ದು ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, SOCO ಟೀಮ್ , ಕಂದಾಯ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಆದರೆ, ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ಮಾಡಲಾಗುವುದಿಲ್ಲ. ಬದಲಿಗೆ ಸ್ಥಳ ಮಹಜರು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
























