ವಿಟ್ಲ: ವಿಟ್ಲ ಪರಿಸರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮೊದಲು ಮೂವರನ್ನು ಬಂಧೀಸಿ ನಂತರ ಇನ್ನೊಬ್ಬನನ್ನು ಬಂಧಿಸಲಾಯಿತು. ಬಂಧಿತರನ್ನು ವಿಟ್ಲ ಕಸಬಾ ಗ್ರಾಮದ ಮಂಗಳಪದವು ನಿವಾಸಿ ಸನತ್ ಕುಮಾರ್ (23), ಮಹಮ್ಮದ್ ರಾಝಿಕ್ (23), ಚೇತನ್ (23) ಎರ್ಮೆ ಮಜಲು ನಿವಾಸಿ ಧ್ಯಾನ್ ಕರ್ಕೆರ (23) ಎಂದು ಗುರುತಿಸಲಾಗಿದೆ.
ಸೆ.15ರಂದು ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಅಳಿಕೆ ಗ್ರಾಮದ ಎರುಂಬು ರಸ್ತೆ ಎಂಬಲ್ಲಿ ದ್ವಿಚಕ್ರ ವಾಹನದೊಂದಿಗೆ ಅನುಮಾಸ್ಪದವಾಗಿ ಮೂವರು ನಿಂತುಕೊಂಡಿದ್ದರು. ಈ ವೇಳೆ ಅವರನ್ನು ವಿಚಾರಿಸಿದಾಗ ಅವರು ಗಾಂಜಾವನ್ನು ಮೋಟಾರ್ ಸೈಕಲಿನಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 6.27 ಗ್ರಾಂ ತೂಕದ ಗಾಂಜಾ, 3 ಮೊಬೈಲ್, ಒಂದು ಸಣ್ಣ ಚೂರಿ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
























