ಬೈಕ್‌ನಲ್ಲಿ ಬಂದು ಮಹಿಳೆಯ ಕತ್ತಿನಿಂದ ಚಿನ್ನ ಎಗರಿಸಿದ ಆರೋಪಿ ಗ್ರಾಮಸ್ಥರ ಬಲೆಗೆ

ಚಿಕ್ಕಮಗಳೂರು: ಬೈಕ್‌‌ನಲ್ಲಿ ಬಂದ ಯುವಕನೊಬ್ಬ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸರ ಕದಿಯಲು ಪ್ರಯತ್ನ ನಡೆಸಿದ್ದು, ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯನ್ನು ಹೇಮಂತ್ ಎಂದು ಗುರುತಿಸಲಾಗಿದೆ.

ಬೈಕ್ ರೈಡಿಂಗ್‌ನಲ್ಲೇ ಸ್ಕೂಟಿಯಲ್ಲಿ ಹೋಗುತ್ತಿದ್ದ ಶಿಲ್ಪಾ ಎಂಬವರ ‌ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಎಗರಿಸಲು ಪ್ರಯತ್ನ ನಡೆಸಿದ್ದಾನೆ. ಗಾಬರಿಯಾದ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರು ಪಕ್ಕದೂರಿಗೆ ಆತನ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕುರುಕುಬಳ್ಳಿ ಗ್ರಾಮದಲ್ಲಿ ಆರೋಪಿ ಬಲೆಗೆ ಬಿದ್ದಿದ್ದಾನೆ.





















































 
 

error: Content is protected !!
Scroll to Top