ನವದೆಹಲಿ: ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳು ಅಸ್ಸಾಂ, ಬಿಹಾರ, ಬಂಗಾಳದಲ್ಲಿ ನುಸುಳುಕೋರರನ್ನು ಪೋಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನುಸುಳುಕೋರರ ರಕ್ಷಣೆಗಾಗಿ ವಿಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಯಾತ್ರೆಗಳನ್ನು ನಡೆಸುತ್ತಿವೆ ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ತಾವು ಮಾಡಿದ ಭಾಷಣವನ್ನು ಉಲ್ಲೇಖಿಸಿ ಮಾತನಾಡಿ ರಾಷ್ಟ್ರೀಯ ಜನಸಂಖ್ಯಾ ಮಿಷನ್ ಅನ್ನು ಘೋಷಣೆ ಮಾಡಿದೆ. ಸಿಯಾಚಿನ್ ಮತ್ತು ಪೂರ್ವ ಭಾರತದಲ್ಲಿ ಒಳನುಸುಳುವಿಕೆಯ ಕಾರಣದಿಂದ ಜನಸಂಖ್ಯಾ ಸ್ಫೋಟ ಮತ್ತು ಭದ್ರತಾ ಬೆದರಿಕೆಯ ಸಮಸ್ಯೆಗಳು ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
























