ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟದ ನಿರೀಕ್ಷೆ
ಮಂಗಳೂರು : ಬಹುದಿನಗಳ ಬೇಡಿಕೆಯಾಗಿರುವ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲುಗಳ ಸಂಚಾರ ಸೋಮವಾರ ಬೆಳಗ್ಗೆ ಆರಂಭಗೊಂಡಿದೆ. ವಿದ್ಯುತ್‌ಚಾಲಿತ ಪ್ರಯಾಣಿಕ ರೈಲು ಸಂಚಾರ ಆರಂಭದೊಂದಿಗೆ ಭವಿಷ್ಯದಲ್ಲಿ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟಕ್ಕೆ ಸಹಕಾರಿಯಾಗಲಿದೆ ಎನ್ನಲಾಗಿದೆ.
ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ರೈಲುಗಳು ವಿದ್ಯುತ್ ಮೂಲಕ ಓಡಾಟ ನಡೆಸಲಿವೆ.
ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲು (ನಂ. 56625/26, 56627/28 ಮತ್ತು 56629/30) ಆರಂಭಗೊಳ್ಳುವುದರೊಂದಿಗೆ ಈ ಭಾಗದ ಪ್ರಯಾಣಿಕರ ಬಹುಕಾಲದ ಕನಸು ನನಸಾಗಿದೆ. ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವಿನ ಹಳಿ ವಿದ್ಯುದೀಕರಣ ಯೋಜನೆ ಪೂರ್ಣಗೊಂಡು ಇದೀಗ ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ನಡುವೆ ವಿದ್ಯುತ್ ಚಾಲಿತ ರೈಲುಗಳ ಓಡಾಟ ಆರಂಭ ಗೊಂಡಿದೆ. ಸೆ.11ರಂದು ವಿದ್ಯುತ್‌ಚಾಲಿತ ರೈಲು ಇಂಜಿನ್‌ನ ಪ್ರಾಯೋಗಿಕ ಪರೀಕ್ಷೆ ನಡೆದು ಅಧಿಕೃತ ಆರಂಭಕ್ಕೆ ದಿನ ನಿಗದಿಯಾಗಿತ್ತು.
























