ಶಿವಮೊಗ್ಗ: ಕೆಲ ದಿನಗಳ ಹಿಂದೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಮೂವರು ಯುವಕರು ಬೈಕ್‌ನಲ್ಲಿ ಪ್ಯಾಲೆಸ್ತೇನ್ ಧ್ವಜ ಹಾರಿಸಿಕೊಂಡು ಪ್ರಯಾಣಿಸಿದ್ದು, ಈ ವಿಡಿಯೋ ಆಧರಿಸಿ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿಯ ಬಿ. ಎಚ್. ರಸ್ತೆಯ ರೈಲ್ವೆ ನಿಲ್ದಾಣ ಮಹಾದ್ವಾರದಲ್ಲಿ 3 ಜನ ಯುವಕರು ಪ್ಯಾಲೆಸ್ಟೈನ್ ಧ್ವಜ ಹಾರಿಸಿಕೊಂಡು ಅಕ್ಸಾ ಮಸೀದಿ ಪ್ಯಾಲೆಸ್ಟೈನ್ ಎಂದು ಬೊಬ್ಬೆ ಹೊಡೆಯುತ್ತಾ ಪ್ರಯಾಣ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

