ಪಂದ್ಯದುದ್ದಕ್ಕೂ ಪಾಕಿಸ್ತಾನಕ್ಕೆ ಅವಮಾನದ ಮೇಲೆ ಅವಮಾನ

ಕನಿಷ್ಠ ಹಸ್ತಲಾಘವ ಕೂಡ ಮಾಡದೆ ಬಿಗುವಿನಿಂದ ನಡೆದುಕೊಂಡ ಭಾರತದ ಆಟಗಾರರು

ದುಬೈ: ನಿನ್ನೆ ರಾತ್ರಿ ನಡೆದ ಏಷ್ಯಾಕಪ್‌ ಟಿ20 ಪಂದ್ಯದುದ್ದಕ್ಕೂ ಭಾರತದ ಆಟಗಾರರು ಪಾಕಿಸ್ತಾನದ ಆಟಗಾರರ ವಿರುದ್ಧ ಬಿಗುವಿನಿಂದ ನಡೆದುಕೊಂಡು ಉದ್ದಕ್ಕೂ ಪಾಕಿಸ್ತಾನವನ್ನು ಅವಮಾನಿಸಿದ್ದಾರೆ. ಪಹಲ್ಗಾಮ್ ಟೆರರ್ ಅಟ್ಯಾಕ್‌ನಲ್ಲಿ ಮಡಿದ ಕುಟುಂಬಗಳ ಜೊತೆ ನಾವಿದ್ದೀವಿ. ಅಪರಿಮಿತ ಶೌರ್ಯ ಪ್ರದರ್ಶಿಸಿದ ಸೇನೆಗೆ ಈ ಗೆಲುವು ಅರ್ಪಣೆ ಎಂದು ಘೋಷಿಸುವ ಮೂಲಕ ಭಾರತದ ಕ್ಯಾಪ್ಟನ್‌ ಸೂರ್ಯಕುಮಾರ್ ಯಾದವ್ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಇಡೀ ಪಂದ್ಯದುದ್ದಕ್ಕೂ ಪಾಕ್ ಆಟಗಾರರ ಕೈ ಕುಲುಕದೆ ನಿಮಗಿರುವ ಗೌರವ ಇಷ್ಟೇ ಎಂದು ತಿಳಿಸಿಕೊಟ್ಟಿದ್ದಾರೆ.

ಎಷ್ಟೇ ವೈರತ್ವವಿದ್ದರೂ ಪಂದ್ಯದ ನಡುವೆ ಉಭಯ ತಂಡಗಳ ಆಟಗಾರರ ನಡುವೆ ಒಂದೆರಡು ಬಾರಿಯಾದರೂ ಮಾತುಕತೆ ನಡೆಯುತ್ತದೆ. ಒಬ್ಬರನ್ನೊಬ್ಬರು ಕಿಚಾಯಿಸುವುದು, ಕಾಲೆಳೆಯುವುದು, ಬೈದುಕೊಳ್ಳುವುದು, ಗುರಾಯಿಸುವುದು ಮೈದಾನದಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದರೆ ಭಾನುವಾರದ ಪಂದ್ಯದಲ್ಲಿ ಇದಾವುದು ಕಾಣಿಸಿಲ್ಲ. ಪಂದ್ಯದ ವೇಳೆ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಮಾತಾಡುವುದಿರಲಿ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ.





















































 
 

ಸಿಕ್ಸ‌ರ್ ಸಿಡಿಸುವ ಗೆಲುವು ದಾಖಲಿಸಿದ ಬಳಿಕ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌, ಪಾಕಿಗಳಿಗೆ ಹ್ಯಾಂಡ್‌ ಶೇಕ್ ಮಾಡದೆ ತಮ್ಮ ಜೊತೆಗಾರ ದುಬೆ ಜೊತೆ ಪೆವಿಲಿಯನ್‌ಗೆ ತೆರಳಿದರು. ಟೀಮ್‌ ಇಂಡಿಯಾದ ಯಾವುದೇ ಆಟಗಾರರು ಡ್ರೆಸ್ಸಿಂಗ್ ರೂಂನಿಂದ ಇಳಿದು ಕೆಳಕ್ಕೇ ಬರಲಿಲ್ಲ. ಭಾರತೀಯರನ್ನು ಅಭಿನಂದಿಸಲು ಪಾಕ್ ಆಟಗಾರರು ಮೈದಾನದಲ್ಲೇ ಕಾಯುತ್ತಾ ನಿಂತಿದ್ದರು. ಆದರೆ ಭಾರತೀಯರೆಲ್ಲರೂ ಡ್ರೆಸ್ಸಿಂಗ್ ರೂಂ ಒಳಕ್ಕೆ ಹೋಗಿ, ಬಾಗಿಲು ಬಂದ್ ಮಾಡಿಕೊಂಡರು.

ಪಂದ್ಯಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆ ಪ್ರಸಾರ ಮಾಡುವುದು ವಾಡಿಕೆ. ಆದರೆ ನಿನ್ನೆ ನಡೆದ ಪಂದ್ಯದ ವೇಳೆ ಪಾಕ್‌ ರಾಷ್ಟ್ರಗೀತೆ ಬದಲು ಡಿಜೆ ಹಾಡು ಪ್ರಸಾರವಾಗಿದ್ದು, ಇದರಿಂದ ಪಾಕ್ ಆಟಗಾರರು ಮುಜುಗರಕ್ಕೀಡಾದರು. ಪಾಕಿಸ್ತಾನದ ರಾಷ್ಟ್ರಗೀತೆ ಪ್ರಸಾರಕ್ಕೂ ಮುನ್ನ ಮೈದಾನದಲ್ಲಿ ‘ಜಿಲೇಬಿ ಬೇಬಿ’ ಹಾಡು 6 ಸೆಕೆಂಡ್ ಪ್ರಸಾರವಾಗಿದೆ. ಬಳಿಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಆಯೋಜಕರು, ಪಾಕ್ ರಾಷ್ಟ್ರ ಗೀತೆಯನ್ನು ಪ್ರಸಾರ ಮಾಡಿದ್ದಾರೆ. ಆದರೆ ಈ ಯಡವಟ್ಟಿನ ವೀಡಿಯೋ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಟಾಸ್ ವೇಳೆ ಸೂರ್ಯಕುಮಾರ್‌ ಯಾದವ್‌, ಪಾಕ್ ನಾಯಕನಿಗೆ ಹ್ಯಾಂಡ್‌ ಶೇಕ್‌ ಮಾಡದೆ ತೆರಳಿದ್ದರು. ಪಂದ್ಯದ ಗೆಲುವಿನ ಬಳಿಕವೂ ಪಾಕ್ ಆಟಗಾರರ ಕೈ ಕುಲುಕದೆ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಸೀದಾ ಡ್ರೆಸ್ಸಿಂಗ್ ರೂಂ ಕಡೆ ಹೋಗಿದ್ದರು. ಬಹುಮಾನ ವಿತರಣೆ ವೇಳೆ ಪಾಕ್ ಜೆರ್ಸಿ ತೊಟ್ಟಿದ್ದ ಮಹಿಳೆಗೂ ಟೀಮ್‌ ಇಂಡಿಯಾ ಆಟಗಾರರು ಶೇಕ್‌ ಮಾಡಿರಲಿಲ್ಲ. ಸಂದರ್ಶನದ ಬಳಿಕ ಪಹಲ್ಗಾಮ್ ದಾಳಿಯಲ್ಲಿ ಮಡಿದವರ ಸಂತ್ರಸ್ತ ಕುಟುಂಬಗಳ ಜೊತೆ ನಾವಿದ್ದೀವಿ. ಈ ಗೆಲುವು ಶೌರ್ಯ ಪ್ರದರ್ಶಿಸಿದ ಸೇನೆಗೆ ಅರ್ಪಿಸುತ್ತೇನೆ ಎಂದು ಹೇಳುತ್ತಿದ್ದಂತೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಂದ ಹರ್ಷೋಧ್ಘಾರ ವ್ಯಕ್ತಪಡಿಸಿದರು.

error: Content is protected !!
Scroll to Top