ಕೆಲಿಂಜ ಶ್ರೀ ಗಣೇಶೋತ್ಸವ ಸಮಿತಿ ರಚನೆ | 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಉತ್ಸವ ಸಮಿತಿ ರಚನೆ

ಕೆಲಿಂಜ : ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಇದರ ನೂತನ ಸಮಿತಿ ರಚನೆ ಇಂದು ಶ್ರೀ ನಿಕೇತನದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.

ಸಮಿತಿ ಅಧ್ಯಕ್ಷರಾಗಿ  ಸಂತೋಷ್ ಶೆಟ್ಟಿ, ಪೆಲತಡ್ಕ, ಉಪಾಧ್ಯಕ್ಷರಾಗಿ ರಾಜೇಂದ್ರ ಪೂಜಾರಿ ನಗ್ರಿಮೂಲೆ, ಕಾರ್ಯದರ್ಶಿಯಾಗಿ ಶ್ರೀಧರ್ ಗೌಡ ನಡುವಲಚ್ಚಿಲು, ಕೋಶಾಧಿಕಾರಿಯಾಗಿ ಸಂತೋಷ್ ಶೆಟ್ಟಿ ಸೀನಾಜೆ, ಜತೆ ಕೋಶಾಧಿಕಾರಿಯಾಗಿ ಶ್ರವಣ್ ಪೂಜಾರಿ ಮಾಡದಾರ್ , ಸಂಘಟನಾ ಕಾರ್ಯದರ್ಶಿ ಯಾಗಿ ಚಿತ್ತರಂಜನ್ ಪೂಜಾರಿ ಪೆಲತಡ್ಕ ಆಯ್ಕೆಯಾದರು.

50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಉತ್ಸವ ಸಮಿತಿಯ ರಚನೆಯನ್ನು ಮಾಡಲಾಗಿದ್ದು, ಅಧ್ಯಕ್ಷರಾಗಿ ಸಂದೀಪ್ ಪೂಜಾರಿ ಪೆಲತಡ್ಕ, ಉಪಾಧ್ಯಕ್ಷರಾಗಿ ಚಂದ್ರಶೇಖರ ಗೌಡ ನಡುವಲಚ್ಚಿಲು, ಸಂದೇಶ್ ಪೂಜಾರಿ ಮಾಡದಾರು, ಮನೋಜ್ ಆಳ್ವ ಕಂಪದಬೈಲು , ಪ್ರಸಾದ್ ಶೆಟ್ಟಿ ಕಲ್ಮಲೆ, ಗೌರವ ಅಧ್ಯಕ್ಷರಾಗಿ ಕೇಶವ ಗೌಡ ಮಾಡದಾರು, ಗೌರವ ಸಲಹೆಗಾರರಾಗಿ ಕೊರಗಪ್ಪ ಗೌಡ ಅಡ್ಯಯಿ,





















































 
 

ಚೇತನ್ ಶೆಟ್ಟಿ ಪೆಲತಡ್ಕ, ಪ್ರಧಾನ ಸಂಚಾಲಕರಾಗಿ ಮುರಳೀಧರ ಪಾಲ್ತಿಮಾರು,

ಕೋಶಾಧಿಕಾರಿಯಾಗಿ ಪವನ್ ಗೌಡ ಅಡ್ಯಯಿ, ತೀರ್ಥೇಶ್, ಮಾಡದಾರು, ಕಾರ್ಯದರ್ಶಿಯಾಗಿ ಅನಂತೇಶ್ ಗೌಡ ಪಾಲ್ತಿಮಾರು, ಯಶವಂತ ಶೆಟ್ಟಿ ಕಂಪದಬೈಲು, ಸಂಘಟನಾ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ ಪಡೀಲ್, ರೋಹಿತ್ ಗೌಡ ಸುಳ್ಯ, ಕ್ರೀಡಾ ಕಾರ್ಯದರ್ಶಿಯಾಗಿ ಜಗದೀಶ್ ರೈ ನಡುವಲಚ್ಚಿಲು, ಅಭಿಲಾಷ್ ಶೆಟ್ಟಿ ಮಾಡದಾರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವಪ್ಪ ಗೌಡ ಪಾಲ್ತಿಮಾರು, ಉದಯ ಸಾಲ್ಯಾನ್  ನಗ್ರಿಮೂಲೆ, ಚಂದ್ರಶೇಖರ ಕಲ್ಮಲೆ, ಅನ್ನಛತ್ರ ವ್ಯವಸ್ಥಾಪಕರಾಗಿ ಶ್ರೀಧರ ಪೂಜಾರಿ ಮಾಡದಾರು ಆಯ್ಕೆಯಾದರು.

ಸಭೆಯಲ್ಲಿ 50ನೇ ವರ್ಷ ನಡೆಯುವ ಗಣೇಶೋತ್ಸವಕ್ಕೆ ಶ್ರೀ ದೇವರಿಗೆ ಬೆಳ್ಳಿಯ ಕಿರೀಟವನ್ನು ಸಮರ್ಪಿಸುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕೆಲಿಂಜ ಘಟಕದ ವತಿಯಿಂದ 25000/- ಧನವನ್ನು ಶ್ರೀ ದೇವರ ಬೆಳ್ಳಿ ಕಿರೀಟದ ವ್ಯವಸ್ಥೆಗೆ ವರ್ಗಾಯಿಸಲಾಯಿತು.

ಪ್ರತೀ ತಿಂಗಳ ಮೊದಲ ಆದಿತ್ಯವಾರದಂದು ಗಣೇಶೋತ್ಸವ ಸಮಿತಿಯ ಸಭೆಯು ನಡೆಸಬೇಕೆಂದು ತೀರ್ಮಾನಿಸಲಾಗಿದ್ದು ಸಮಯವನ್ನು ಮುಂದಿನದಿನಗಳಲ್ಲಿ ತಿಳಿಸಲಾಗುವುದು, ಎಲ್ಲರೂ ಜೋಡಿಸಿಕೊಳ್ಳಬೇಕಾಗಿ ಸಮಿತಿಯ ಪರವಾಗಿ ವಿನಂತಿಸಲಾಯಿತು.

error: Content is protected !!
Scroll to Top