ಪುತ್ತೂರು: ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘವು 2024-25 ನೇ ಸಾಲಿನಲ್ಲಿ ರೂ.40.11 ಕೋಟಿ ವ್ಯವಹಾರ ನಡೆಸಿ 20.31 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಘೋಷಣೆ ಮಾಡಿದರು.
ಶುಕ್ರವಾರ ಸಂಘದ ಪ್ರಧಾನ ಕಚೇರಿಯ ಮಾಧುರಿ ಸೌಧದ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ವರ್ಷಾಂತ್ಯಕ್ಕೆ ಸಂಘದಲ್ಲಿ 5020 ಸದಸ್ಯರಿಂದ 14.60 ಲಕ್ಷ ರೂ. ಪಾಲು ಬಂಡವಾಳ, 4.35 ಕೋಟಿ ವಿವಿಧ ಠೇವಣಾತಿ, 3.33 ಕೋಟಿ ರೂ. ನಿಧಿಗಳನ್ನು ಹೊಂದಿದೆ. ವರ್ಷಾಂತ್ಯಕ್ಕೆ ವಿವಿಧ ರೂಪದಲ್ಲಿ .2.31 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘ ಮಹಾಮಂಡಲದ ನಿರ್ದೇಶಕ ವೀರಪ್ಪ ಗೌಡ ಹಾಗೂ ಸಂಘದಲ್ಲಿ ಸೇಲ್ಸ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಆಶಾ ಅವರನ್ನು ಸನ್ಮಾನಿಸಲಾಯಿತು.
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಜೇನು ಪೂರೈಸಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ನಿರ್ದೇಶಕರಾದ ಜಿ. ಪಿ. ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡುವೂರು, ಎಚ್. ಸುಂದರ ಗೌಡ, ಇಂದಿರಾ.ಕೆ, ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಶಿವಾನಂದ, ಮೋಹನ ಎ, ಪುಟ್ಟಣ್ಣ ಗೌಡ ಕೆ, ಗೋವಿಂದ ಭಟ್ ಪಿ., ಶಂಕರ ಪೆರಾಜೆ, ಸರಸ್ವತಿ ವೈ. ಪಿ, ಸುಶೀಲ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ದಕ್ಷಿತಾ ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ವಾರ್ಷಿಕ ವರದಿ, ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು.
























