ಚದುರಂಗ ಸ್ಪರ್ಧೆಯಲ್ಲಿ ಅಂಬಿಕಾದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವಿದ್ಯಾರ್ಥಿಗಳು ವಿದ್ಯಾಭಾರತಿ ವಿಭಾಗ ಹಾಗೂ ವಲಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಅಂಬಿಕಾ ಪದವಿಪೂರ್ವ ವಿದ್ಯಾಲಯ: ಅಶ್ವಿನ್ ಪಿ.ಎಸ್., ರಂಜನ್ ವಿ. ಅವರು ಚಿಕ್ಕಬಳ್ಳಾಪುರದ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಆಯೋಜಿಸಲಾದ ರಾಜ್ಯಮಟ್ಟ ಹಾಗೂ ವಲಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಕ್ಟೋಬರ್ 8 ರಂದು ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಚೆಸ್ ಟೂರ್ನಮೆಂಟಲ್ಲಿ ಸ್ಪರ್ಧಿಸಲಿದ್ದಾರೆ.

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ: ಚಿಕ್ಕಬಳ್ಳಾಪುರದ ಚಿಂತಾಮಣಿ ಮುಂಗನಹಳ್ಳಿಯ ಪಟ್ಟಿ ಆದಿನಾರಾಯಣ ರಾಮ ಲಕ್ಷಮಣ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಪ್ರಾಂತಮಟ್ಟದ ಹಾಗೂ ವಿಭಾಗ ಮಟ್ಟದ ಚೆಸ್ ಪಂದ್ಯಾಟದ ೧೪ರ ವಯೋಮಾನದ ಬಾಲಕರ ವಿಭಾಗದಲ್ಲಿ ಎಂಟನೇ ತರಗತಿಯ ಸನ್ಮಯ್.ಎನ್, ಆರನೇ ತರಗತಿಯ ವಿದ್ಯಾರ್ಥಿ ಸಂಹಿತ್ ಜೋಸ್ಸಿ ಲೋಬೋ, ಮಯೂರ್.ಎಸ್.ಮಯ್ಯ, ರತುಲ್ ಅದ್ವೈತ ಹಾಗೂ ತ್ರಿನಯ್ ರೈ ಪ್ರಾಂತ ಹಗೂ ವಿಭಾಗೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರೊಂದಿಗೆ ರಾಷ್ಟ್ರ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.





















































 
 
error: Content is protected !!
Scroll to Top