ಯುವಕ ನೇಣು ಬಿಗಿದು ಆತ್ಮಹತ್ಯೆ

ಕಡಬ: ಉದ್ಯೋಗವಿಲ್ಲ ಎಂದು ಮನನೊಂದು ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಕೇರ್ಪಡ ಎಂಬಲ್ಲಿ ನಡೆದಿದೆ.

ಸಿವಿಲ್ ಇಂಜಿನಿಯರ್ ಕೇರ್ಪಡ ನಿವಾಸಿ ಸುಜಯ್ (28) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಮತ್ತು ಹಾಸನದಲ್ಲಿ ಸುಮಾರು ಆರು ತಿಂಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ, ಬಳಿಕ ಜೀವನ ನಡೆಸಲು ಸಂಬಳ ಸಾಕಾಗುವುದಿಲ್ಲವೆಂದು ಕೆಲಸ ಬಿಟ್ಟು ಊರಿನಲ್ಲಿ ಕೃಷಿ ಮತ್ತು ಗ್ರಾಮ ಪಂಚಾಯಿತಿಯ ಸಣ್ಣಪುಟ್ಟ ಕಾಮಗಾರಿಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದರು.

ಸರಿಯಾದ ಕೆಲಸ ಸಿಕ್ಕಿಲ್ಲ ಎಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಶನಿವಾರ ಮೃತರ ತಂದೆ ಸುಂದರ ಗೌಡ ತನ್ನ ಅಕ್ಕನ ಮನೆ ಕೊಡಿಂಬಾಳ ಗ್ರಾಮದ ಮಡ್ಯಡ್ಕಕ್ಕೆ ಶ್ರಾವಣ ಶನಿವಾರದ ಊಟಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ ಸುಜಯ್ ರಾತ್ರಿ ಹೊತ್ತು ಮನೆಯ ಹಿಂದುಗಡೆ ಇರುವ ಹಳೆಯ ಮನೆಯ ಛಾವಣಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿದಿರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ತಿಳಿದು ಬಂದಿದೆ. ಸುಂದರ ಗೌಡ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





















































 
 
error: Content is protected !!
Scroll to Top