ಮುಂಬೈ: ದೇಶದ ಯುವ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೂರ್ತಿ ಎಂದು ನಟ ವಿವೇಕ್ ಒಬೆರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೆ. 17 ರಂದು ಪ್ರಧಾನಿ ಮೋದಿ ಅವರ ಜನ್ಮದಿನ ಮತ್ತು ಅಖಿಲ ಭಾರತೀಯ ತೇರಾಪಂತ್ ಯುವಕ್ ಪರಿಷತ್ (ABTYP) ನ ಸಂಸ್ಥಾಪನಾ ದಿನ ಎರಡೂ ಆಗಿದ್ದು, ಈ ಹಿನ್ನೆಲೆಯಲ್ಲಿ ನಾವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ವಿವೇಕ್ ಒಬೆರಾಯ್ ತಿಳಿಸಿದ್ದಾರೆ.
ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ರಕ್ತದಾನ, ನೇತ್ರದಾನ, ಅಂಗಾಂಗ ದಾನ ನೋಂದಣಿ ಅಥವಾ ಯಾವುದೇ ಇತರ ಲೋಕೋಪಕಾರಿ ಸಮುದಾಯ ಸೇವೆಯಂತಹ ನಿಸ್ವಾರ್ಥ ಕಾರ್ಯಗಳನ್ನು ಮಾಡಲು ಜನರು ಒಗ್ಗೂಡಿದರೆ, ಅದು ಪ್ರಧಾನಮಂತ್ರಿವರಿಗೆ ಗೌರವ ಸಲ್ಲಿಸುವ ಅತ್ಯುತ್ತಮ ವಿಧಾನ ಎಂದು ಅವರು ಹೇಳಿದ್ದಾರೆ.
























