ಮಂಗಳೂರು : ಭೀಕರ ಅಗ್ನಿ ಅವಘಡದಲ್ಲಿ ಫ್ಯಾಕ್ಟರಿ ಸುಟ್ಟು ಭಸ್ಮ

ಸುಗಂಧ್ರ ದ್ರವ್ಯ ತಯಾರಿಸುವ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತ

ಮಂಗಳೂರು: ನಗರದ ಹೊರವಲಯದಲ್ಲಿರುವ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಸುಗಂಧ ದ್ರವ್ಯ ತಯಾರಿಸುವ ಫ್ಯಾಕ್ಟರಿಯೊಂದಕ್ಕೆ ಇಂದು ಮುಂಜಾನೆ ಹೊತ್ತು ಬೆಂಕಿ ಹತ್ತಿಕೊಂಡು ಅಪಾರ ನಾಶ ಸಂಭವಿಸಿದೆ.

ಅರೋಮಾಝೆನ್ ಎಂಬ ಸುಗಂಧ ದ್ರವ್ಯ ತಯಾರಿಕಾ ಫ್ಯಾಕ್ಟರಿಗೆ ಬುಧವಾರ ಬೆಳಗ್ಗೆ 5ರ ಸುಮಾರಿಗೆ ಬೆಂಕಿ ತಗುಲಿದೆ‌. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.





















































 
 

ಫ್ಯಾಕ್ಟರಿ ಬಹುತೇಕ ಸುಟ್ಟು ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಂಸಿಎಫ್, ಎನ್ಎಂಪಿಎ ಮತ್ತು ಕದ್ರಿಯ ಅಗ್ನಿ ಶಾಮಕ ದಳ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ‌ಯನ್ನು ನಂದಿಸಿವೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top