ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ, ವಾರ್ಷಿಕೋತ್ಸವ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡ್ಯನಡ್ಕ ಒಕ್ಕೂಟದ ಕ್ರೀಡಾಕೂಟ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮ ಜನತಾ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಧ್ಯೇಯಗೀತೆಯೊಂದಿಗೆ ಪ್ರಾರಂಭಗೊಂಡ ಈ
ಕಾರ್ಯಕ್ರಮವನ್ನು ಈ ವಿದ್ಯಾಸಂಸ್ಥೆಯ ಸಂಚಾಲಕಿ ಡಾ.ಅಶ್ವಿನಿ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಚೆಲ್ಲಡ್ಕ ಪುಷ್ಪಾಕರ ರೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುದ್ದುಪದವು ಶಾಲೆಯ ಶಿಕ್ಷಕ ವಿಠಲ ಜಿ., ವಲಯ ಮೇಲ್ವಿಚಾರಕ ಚಂದ್ರಶೇಖರ್ ಉಪಸ್ಥಿತರಿದ್ದರು.





















































 
 

ಅಪರಾಹ್ನ ನಡೆದ ಸಮರೂಪ ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಮೈರುಗ ವಹಿಸಿದ್ದರು. ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಅವರು ವಹಿಸಿದ್ದರು. ಪುರುಷರು ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

SSLC ಮತ್ತು PUC, ಪದವಿಯಲ್ಲಿ 500 ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಮಕ್ಕಳನ್ನು, ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಮಹನೀಯರನ್ನು, ಹಿರಿಯರನ್ನು ಸನ್ಮಾನಿಸಲಾಯಿತು. ವಾರ್ಷಿಕ ವರದಿಯನ್ನು ಸೇವ ಪ್ರತಿನಿಧಿ ಗಾಯತ್ರಿ ಎಸ್. ಮಂಡಿಸಿದರು.ಯತೀಶ್ ಉಳಯ ನಿರೂಪಿಸಿದರು. ಕಾವ್ಯ ಧನ್ಯವಾದ ಸಮರ್ಪಿಸಿದರು.

error: Content is protected !!
Scroll to Top