ಕಲೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಹಿರಿಯರು ಮಾಡಿರುವ ಸಾಧನೆಗಳಿಂದ ನಾವು ಸಾಮಾಜಿಕವಾಗಿ ಒಗ್ಗೂಡುವಂತಾಗಿದೆ. ಹಿರಿಯರ ಸಂಸ್ಮರಣೆಯಿಂದ ಈ ವಿಚಾರಧಾರೆಯು ಮುಂದಿನ ಪೀಳಿಗೆಗೆ ಆದರ್ಶವಾಗಿ ದಾರಿದೀಪವಾಗುತ್ತದೆಯೆಂದು ಮಂಗಳೂರು ಯಕ್ಷಾಂಗಣದ ಅಧ್ಯಕ್ಷ, ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.
ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಂಬೋಟು ಮನೆತನದ ಹಿರಿಯರಾದ ದಿ.ಪದ್ಮನಾಭ ಮತ್ತು ದಿ. ನೀಲಾವತಿ ಸಂಸ್ಮರಣೆ ಮಾಡಿ ಅರ್ಥದಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ಪ್ರಧಾನ ಮಾಡಲಾದ ನೀಲಪದ್ಮ ಪ್ರಶಸ್ತಿಯ ಸನ್ಮಾನ ಪತ್ರ ವಾಚಿಸಿದರು.

ಶ್ರೀ ರಾಮ ಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕಲಾವಿದ ಗಣರಾಜ ಕುಂಬ್ಳೆ ಕಲೆ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯರಿಬ್ಬರ ಸಾಧನೆಗಳನ್ನು ತಿಳಿಸಿ ನುಡಿ ನಮನ ಅರ್ಪಿಸಿದರು.
ವೇದಿಕೆಯಲ್ಲಿ ಉಮೇಶ್ ಶೆಣೈ ರಾಮನಗರ, ಪಾತಾಳ ಅಂಬಾ ಪ್ರಸಾದ್, ಉಪ್ಪಿನಂಗಡಿ ಪಟ್ಲ ಫೌಂಡೇಶನ್ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ, ದೇವದಾಸ ಎಸ್ ಪಿ ಹರಿಹರ, ಡಾ ಸುರೇಶ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.
ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಕೈಲಾರು ರಾಜಗೋಪಾಲ ಭಟ್, ಯು ಜಿ ರಾಧಾ, ಜಯಂತ ಪುರೋಳಿ, ಸುರೇಶ ಪುತ್ತೂರಾಯ, ಸುಬ್ರಹ್ಮಣ್ಯ ರಾವ್. ಬಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜೀವ ಪಾರೆಂಕಿ, ಗಂಗಾಧರ ಟೈಲರ್ ಸುರೇಶ್ ರಾವ್ ಬಿ, ಸುಧಾಕರ ಕೋಟೆ, ಶ್ರೀಧರ ಭಟ್ ಕೆ, ನೀರಜ್ ಕುಮಾರ್, ಹರೀಶ ಆಚಾರ್ಯ ಪುಳಿತ್ತಡಿ, ಆಶಾಲತಾ ಕಲ್ಲೂರಾಯ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಭಾರತಿ ಎಂ.ಎಲ್, ಪವಿತ್ರಾಕ್ಷಿ, ರವೀಂದ್ರ ದರ್ಬೆ, ಸತೀಶ ಶಿರ್ಲಾಲು, ಹರೀಶ್ ಆಚಾರ್ಯ ಮದ್ದಡ್ಕ, ರಾಜೇಶ ಪ್ರಭು, ಗೀತಾ ಕುದ್ದಣ್ಣಾಯ, ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತ ಆಳ್ವ, ಶೃತಿ ವಿಸ್ಮಿತ್ , ನಿತೀಶ್ ಮನೋಳಿತ್ತಾ ಯ, ಪ್ರಕಾಶ ಅಭ್ಯಂಕರ್, ಅರ್ಜುನ ಅಭ್ಯಂಕರ್, ದುಶ್ಯಂತ್ ಕೃಷ್ಣಾಪುರ ಮೊದಲಾದವರು ಭಾಗವಹಿಸಿದ್ದರು.

ಸುವರ್ಣ ಶತಕ ತಾಳಮದ್ದಳೆ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿರುವ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಪದಾಧಿಕಾರಿಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ ಎಸ್ ಪಿ ಗೌರವಿಸಿದರು.
ಶ್ರೀ ಕಾಳಿಕಾಂಬ ಟ್ರಸ್ಟಿನ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಇಳಂತಿಲ ಸ್ವಾಗತಿಸಿ ಶಿಕ್ಷಕಿ ಪುಷ್ಪಾ ತಿಲಕ್ ವಂದಿಸಿದರು. ಟ್ರಸ್ಟಿನ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಾಸ್ಕರ್ ರಾಯ್ ಕುಕ್ಕುವಳ್ಳಿ ದಿವಾಕರ್ ಆಚಾರ್ಯ ಗೇರುಕಟ್ಟೆ ಭಾಸ್ಕರ ರೈ ಕುಕ್ಕುವಳ್ಳಿ, ದಿವಾಕರ ಆಚಾರ್ಯ ಗೇರುಕಟ್ಟೆ, ದೇವದಾಸ ಎಸ್ ಪಿ ಹರಿಹರ, ಶ್ರೀಧರ ಎಸ್ ಪಿ ಕೃಷ್ಣಾಪುರ, ಶ್ರುತಿ ವಿಸ್ಮಿತ್ ಮತ್ತು ಸಂಘದ ಹಿಮ್ಮೇಳ ಕಲಾವಿದರಿಂದ ಭೀಷ್ಮ ಸೇನಾಧಿಪತ್ಯ ತಾಳಮದ್ದಳೆ ಜರಗಿತು. ಗಂಗಾಧರ್ ಟೈಲರ್ ಉಪ್ಪಿನಂಗಡಿ ಪರವಾಗಿ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.ಈ ಮೊದಲು ಶ್ರೀ ಸಾಯಿ ಕಲಾ ಯಕ್ಷ ಬಳಗ ಪುತ್ತೂರು ಇವರಿಂದ ವಿದುರಾತಿಥ್ಯ, ಯಕ್ಷನಂದನ ಗೋಕುಲನಗರ ಕೊಯ್ಲ ಇವರಿಂದ ಬಭ್ರವಾಹನ ಕಾಳಗ ಪ್ರದರ್ಶನದೊಂದಿಗೆ 98 ತಾಳಮದ್ದಳೆ ಸಂಪನ್ನಗೊಂಡಿತು.
























