ಶ್ರೀ ಮಹಾಭಾರತ ಸರಣಿ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ 50 ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ನಾಲ್ಕನೇ ಹಂತದ ತಾಳಮದ್ದಳೆಯ ಉದ್ಘಾಟನಾ ಕಾರ್ಯಕ್ರಮವು ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು.

ಭಾರತೀಯ ಭೂಸೇನೆಯ ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ತಾಳಮದ್ದಳೆಯಂತ ಕಲಾ ಪ್ರಕಾರಗಳು ಸಮರ್ಥ ಮಾಧ್ಯಮವಾಗಿದ್ದು ಇದನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಮಾಜಿ ಶಾಸಕರಾದ ಸಂಜೀವ ಮಠ0ದೂರು ಮಾತನಾಡಿ ಯಕ್ಷಗಾನ ಒಂದು ಆರಾಧನೆ ಕಲೆಯಾಗಿ ಧಾರ್ಮಿಕ ಸಂದೇಶವನ್ನು ಜನರಿಗೆ ನೀಡುತ್ತದೆ. ಯುವ ಜನಾಂಗವು ಹೆಚ್ಚಾಗಿ ಈ ಕಲೆಯಲ್ಲಿ ಭಾಗವಹಿಸುವಂತಾಗಬೇಕೆಂದು ತಿಳಿಸಿದರು.





















































 
 

ವೇದಿಕೆಯಲ್ಲಿ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಸಾಮಾಜಿಕ ಮುಂದಾಳು ಕಂಗ್ವೆ ವಿಶ್ವನಾಥ ಶೆಟ್ಟಿ, ಪುತ್ತೂರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ತಾಳಮದ್ದಳೆಯ ಸಂಯೋಜಕರಾದ ಉಮೇಶ ಶೆಣೈ ರಾಮನಗರ, ಕಾರ್ಯದರ್ಶಿ ಶ್ರೀಪತಿಭಟ್ ಉಪ್ಪಿನಂಗಡಿ, ಪದ್ಮನಾಭ ಕುಲಾಲ್ ಇಳಂತಿಲ, ಪಾತಾಳ ಅಂಬಾ ಪ್ರಸಾದ್, ಸತೀಶ್ ಶಿರ್ಲಾಲು, ದುರ್ಗಪ್ಪ ಯನ್, ಕಿಶೋರಿ ದುಗ್ಗಪ್ಪ, ಸಂಜೀವ ಪಾರೆಂಕಿ, ರಾಜೇಶ್ ಪ್ರಭು, ವಿಶ್ವನಾಥ ಮರಿಕೆ ಉಪಸ್ಥಿತರಿದ್ದರು.

ಅಚ್ಯುತ ಪಾಂಗಣ್ಣಾಯ, ಶ್ರೀಪತಿ ಭಟ್ ಹಿಮ್ಮೇಳದಲ್ಲಿ ಭಾಗವತ ಲಕ್ಷ್ಮೀನಾರಾಯಣ ಭಟ್ ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥಿಸಿದರು.
ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಗೀತಾ ಕುದ್ದಣ್ಣಾಯ ವಂದಿಸಿದರು. ಕಲಾವಿದ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು .ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದಿಂದ ಕರ್ಣ ಭೇದನ, ಬ್ರಾಹ್ಮರಿ ಮಹಿಳಾ ಕಲಾವೃಂದ ಅಶೋಕನಗರ ತಂಡದಿಂದ ಕರ್ಣ ಅವಸಾನ, ಮಹಿಳಾಯಕ್ಷ ಕೂಟ ಕದ್ರಿ ಮಂಗಳೂರು ತಂಡದಿಂದ ಗದಾಯುದ್ಧ ತಾಳಮದ್ದಳೆ ಜರಗಿತು.

error: Content is protected !!
Scroll to Top