ಪುತ್ತೂರು: ಹಿಂದಿನ ಕಾಲದ ತುಳು ಪರಂಪರೆಯನ್ನು ಇಂದಿನ ಯುವಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಪುತ್ತೂರು ತುಳುಕೂಟದ ಕಾರ್ಯವೈಖರಿಯನ್ನು ಜಿ. ಎಲ್. ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಲರಾಮ ಆಚಾರ್ಯ ಅವರು ಶ್ಲಾಘಿಸಿದರು.
ಪುತ್ತೂರು ತುಳುಕೂಟ ಮತ್ತು ಚಿಗುರೆಲೆ ಸಾಹಿತ್ಯ ಬಳಗದ ಸಹಯೋಗದಲ್ಲಿ ನಡೆದ ತುಳು ಕಬಿಕೂಟ -2025 ಅನ್ನು ತುಳು ಕಬಿತೆಯನ್ನು ವಾಚಿಸುವ ಮೂಲಕ ಅವರು ಉದ್ಘಾಟನೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿ ಸುದಾನ ಶಾಲಾ ಶಿಕ್ಷಕಿ, ಸಾಹಿತಿ ಕವಿತಾ ಅಡೂರು ಅವರು ಉದಯೋನ್ಮುಖ ಕವಿಗಳಿಗೆ ಮಾರ್ಗದರ್ಶನ ನೀಡಿದರು.
ಮಂಗಳೂರು ಆಕಾಶವಾಣಿಯ ಕಾರ್ಯ ನಿರ್ವಾಹಕ, ಸಾಹಿತಿ ಅಕ್ಷತಾರಾಜ್ ಪೆರ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರ ದಿನದ ಅಂಗವಾಗಿ 20 ಮಂದಿ ಶಿಕ್ಷಕರನ್ನು ಗೌರವಿಸಲಾಯಿತು.
ತುಳುಕೂಟದ ಜತೆಕಾರ್ಯದರ್ಶಿ ನಯನಾ ರೈ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಂಚಾಲಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾರಂಭದಲ್ಲಿ ರವಿ ಪಾಂಬಾರ್ ತುಳುನಾಡ ಪೊರ್ಲು ಸುಗಿಪು ಗೀತೆ ಹಾಡಿದರು. ಜಗದೀಶ್ ಬಾರಿಕೆ, ಕಾವ್ಯಶ್ರೀ, ಶ್ರೀಶಾವಾಸವಿ ತುಳುನಾಡು ಮತ್ತು ರಶ್ಮಿತಾ ಸುರೇಶ್ ಜೋಗಿಬೆಟ್ಟು ಅವರುಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸುಪ್ರೀತಾ ಚರಣ್ ಪಾಲಪ್ಪೆ ವಂದಿಸಿದರು.
























