ಮಲ್ಲಿಗೆ ಮುಡಿದದ್ದಕ್ಕೆ 1 ಲ.ರೂ. ದಂಡ ತೆತ್ತ ನಟಿ!

ಸಿಡ್ನಿ: ದಕ್ಷಿಣ ಭಾರತದ ಜನಪ್ರಿಯ ನಟಿ ನವ್ಯಾ ನಾಯರ್‌ ಮಲ್ಲಿಗೆ ಮುಡಿದ ಕಾರಣಕ್ಕೆ 1 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ದಂಡದ ರೂಪದಲ್ಲಿ ತೆರಬೇಕಾಗಿ ಬಂದಿದೆ. ಆದರೆ ದಂಡ ಹಾಕಿರುವುದು ಭಾರತದಲ್ಲಿ ಅಲ್ಲ, ಬದಲಾಗಿದೆ ಆಸ್ಟ್ರೇಲಿಯಲ್ಲಿ.

ಇತ್ತೀಚೆಗೆ ಆಸ್ಟ್ರೇಲಿಯದ ಮಲಯಾಳಂ ಸಂಘಟನೆಯವರು ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನವ್ಯಾ ನಾಯರ್‌ ಹೋಗಿದ್ದರು. ಮೆಲ್ಬೋರ್ನ್ ಏರ್‌ಪೋರ್ಟ್‌ಗೆ ಬಂದಿಳಿದ ನಟಿ ನವ್ಯಾ ನಾಯರ್‌ಗೆ ಅಲ್ಲಿನ ಅಧಿಕಾರಿಗಳು 1.14 ಲ.ರೂ. ದಂಡ ಹಾಕಿದ್ದಾರೆ.

ಕೇರಳದ ಕೊಚ್ಚಿಯಿಂದ ನಟಿ ನವ್ಯಾ ನಾಯರ್ ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಈ ವೇಳೆ ವಿಮಾನ ಹತ್ತುವ ಮುನ್ನ ಆಕೆಯ ತಂದೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು. ಇದರಲ್ಲಿ ಒಂದು ತುಂಡು ಮುಡಿದುಕೊಂಡು ಇನ್ನೊಂದು ತುಂಡನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಬ್ಯಾಗ್‌ ಚೆಕ್ಕಿಂಗ್‌ ವೇಳೆ ಇದನ್ನು ನೋಡಿದ ಅಧಿಅಕರಿಗಳು 1.14 ಲಕ್ಷ ರೂ. ದಂಡ ವಿಧಿಸಿದ್ದಾರೆ ಎಂದು ನಟಿ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.





















































 
 

ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲು ಮಾಹಿತಿ ನೀಡಬೇಕು. ನಟಿಗೆ ಈ ವಿಚಾರ ಗೊತ್ತಿರಲಿಲ್ಲ. ಹೀಗಾಗಿ ದಂಡ ಪಾವತಿಸಬೇಕಾಯಿತು.

ಇದೊಂದು ಅನುಭವ. ಈ ರೀತಿಯ ಅನುಭವಗಳು ಹೊಸದನ್ನು ಕಲಿಸುತ್ತವೆ. ಗೊತ್ತಿಲ್ಲದೆ ಆದ ತಪ್ಪು ಆಗಿದ್ದರೂ ತಪ್ಪು ತಪ್ಪೇ ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನವ್ಯಾ ನಾಯರ್‌ ಮಲಯಾಳಂನ ಬಹುಬೇಡಿಕೆಯ ನಟಿಯಾಗಿದ್ದು, ಕನ್ನಡದಲ್ಲೂ ದೃಶ್ಯ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

error: Content is protected !!
Scroll to Top