ನವದೆಹಲಿ: ಪಾಕ್ ವಿರುದ್ಧ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರ್ ಕೇವಲ 3 ದಿನಕ್ಕೆ ಮುಗಿದಿರುವುದಲ್ಲ. ಧೀರ್ಘ ಕಾಲ ಮುಂದುವರೆದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ದ್ವಿವೇದಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಮೀರಿ ಎಲ್ಲವನ್ನೂ ನಮಗೆ ಹಂಚಿಕೊಳ್ಳಲು ಅಸಾಧ್ಯ ಎಂದಿದ್ದಾರೆ. ಈ ಕಾರ್ಯಾಚರಣೆಯ ಪರಿಣಾಮಗಳನ್ನು ಈಗಲೇ ಹೇಳುವುದು ಕಷ್ಟ. ಪಾಕ್ ಪ್ರೇರಿತ ಉಗ್ರರು ಗಡಿ ಪ್ರದೇಶದಲ್ಲಿ ದೇಶದೊಳಕ್ಕೆ ನುಗ್ಗಲು ಚಟುವಟಿಕೆಗಳನ್ನು ಇನ್ನೂ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ಅಂತ್ಯವಾಗಿ ಹೆಚ್ಚು ಸಮಯವಾಗಿಲ್ಲ. ಆದ್ದರಿಂದ ಪರಿಣಾಮದ ಬಗ್ಗೆ ಮಾತನಾಡುವುದು ಕಷ್ಟ. ಆದರೆ ಇದರಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ, ಎಷ್ಟು ಜನ ಉಗ್ರರು ತಪ್ಪಿಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದ ಸಂಗತಿ ಎಂದು ನುಡಿದಿದ್ದಾರೆ.
























