GST ವ್ಯವಸ್ಥೆಯಲ್ಲಿ ಬದಲಾವಣೆ ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬಲಿದೆ: H.D. ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ಮೋದಿ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದು, ಇದು ದೇಶಕ್ಕೆ ಪ್ರಧಾನಿ ಮೋದಿ ಅವರ ದೀಪಾವಳಿ ಕೊಡುಗೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಿಎಸ್‌ಟಿ ‌ಸುಧರಣೆಗಳಿಗೆ ಅನುಮೋದನೆ ನೀಡಲಾಗಿದೆ. ಈ ನಿರ್ಧಾರ ಜನಜೀವನ‌ ಸುಲಭಗೆೊಳಿಸುವ ಮತ್ತು ಆತ್ಮನಿರ್ಭರ ಭಾರತಕ್ಕೆ ಶಕ್ತಿ ತುಂಬುವಲ್ಲಿ ಮಹತ್ವದ ಮತ್ತು ಪರಿಣಾಮಕಾರಿ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಿಎಸ್‌ಟಿ ಈಗ ಕೇವಲ ಎರಡು ಫ್ಲ್ಯಾಬ್‌ಗಳನ್ನು ಹೊಂದಿದ್ದು, ಅದು 5% ಮತ್ತು 18% ಆಗಿರುತ್ತದೆ. ದೈನಂದಿನ ಜೀವನದ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ವಾಹನಗಳು ಸಹ ಸುಲಭವಾಗಿ ಕೈಗೆಟುಕುವಂತಾಗುತ್ತವೆ. ಜೊತೆಗೆ, ಉದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (ಎಮ್‌ಎಸ್ಎಮ್‌ಇ) ಗಳು ಭಾರೀ ಉತ್ತೇಜನವನ್ನು ಪಡೆಯುತ್ತವೆ ಎಂದು ಅವರು ಹರ್ಷ ಹಂಚಿಕೊಂಡಿದ್ದಾರೆ.





















































 
 

error: Content is protected !!
Scroll to Top