ಬಾನು ಮುಷ್ತಾಕ್ ಹಿಂದೂವೇ?: ಯತ್ನಾಳ್ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ನಾಯಕರ ಧರ್ಮಸ್ಥಳ ಯಾತ್ರೆಯನ್ನು ಲೇವಡಿ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ‌ಸಿದ್ದರಾಮಯ್ಯ ಮಾಂಸಾಹಾರ ಸೇವಿಸದೆ ಧರ್ಮಸ್ಥಳಕ್ಕೆ ಹೋಗಲಿ ಎಂದು ಹೇಳಿದ್ದಾರೆ.

ಧರ್ಮಸ್ಥಳ ಚಲೋ ‌ನಡೆಸುವ ಬುದ್ಧಿ ಕಾಂಗ್ರೆಸಿಗರಿಗೆ ಬಂದಿರುವುದು ಉತ್ತಮ ಸಂಗತಿ. ಈ ವರೆಗೆ ಮಸೀದಿ, ದರ್ಗಾ‌ಗೆ ಹೋಗುತ್ತಿದ್ದರು. ಈಗ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ. ಮಾಂಸಾಹಾರ ಸೇವಿಸದೆ ಸಿದ್ದರಾಮಯ್ಯ ಅವರೂ ಹೋಗಲಿ. ಡಿಕೆಶಿ ಅವರೂ ಹೋಗಲಿ ಎಂದು ಹೇಳಿದ್ದಾರೆ.

ಮೈಸೂರು ದಸರಾದಲ್ಲಿ ಸನಾತನ ಸಂಸ್ಕೃತಿಯ ಸಂಸ್ಕಾರಗಳು ನಡೆಯುತ್ತದೆ. ಅಲ್ಲಿ ಬಾನು ಮುಷ್ತಾಕ್‌ಗೆ ಏನು ಕೆಲಸ? ಅವರು ಹಿಂದೂವೇ ಎಂದು ಪ್ರಶ್ನೆ ಮಾಡಿದ್ದಾರೆ. ಚಾಮುಂಡೇಶ್ವರಿ ತಾಯಿಯ ಶಾಪ ಬೇಡವಾದರೆ ಈ ಕಾರ್ಯದಿಂದ ಅವರು ಹಿಂದಕ್ಕೆ ಸರಿಯಬೇಕು ಎಂದು ಹೇಳಿದ್ದಾರೆ.





















































 
 

error: Content is protected !!
Scroll to Top