ಸೆಪ್ಟೆಂಬರ್ 7, 2025 -ಹುಣ್ಣಿಮೆಯ ರಾತ್ರಿಯಂದು, ಚಂದ್ರನು ಭೂಮಿಯ ಸುತ್ತಲೂ ತನ್ನ ಕಕ್ಷೆಯಲ್ಲಿ ಹೋಗುತ್ತಾ, ಸೂರ್ಯನಿಂದ ಭೂಮಿಯ ಹಿಂಬದಿ ಬಂದಾಗ ಚಂದ್ರ ಗ್ರಹಣವಾಗಲಿದೆ. ಚಂದ್ರನು ಪೂರ್ತಿಯಾಗಿ ಭೂಮಿಯ ನೆರಳಿನಲ್ಲಿ ಬರುವ ಕಾರಣ, ಇದು ಖಗ್ರಾಸ ಚಂದ್ರ ಗ್ರಹಣವಾಗಿರುತ್ತದೆ.
ಖಗ್ರಾಸ ಚಂದ್ರ ಗ್ರಹಣದ ವೇಳೆ. ಚಂದ್ರನು ತಾಮ್ರದಂತೆ ಕೆಂಪು ಬಣ್ಣ ಹೊಂದಿರುತ್ತಾನೆ. ಭೂಮಿಯು, ಚಂದ್ರನ ಮೇಲೆ ನೇರವಾಗಿ ಬೀಳುವ ಸೂರ್ಯನ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ, ಈ ಗ್ರಹಣ ಕಾಲದಲ್ಲಿ, ಚಂದ್ರನು ಮೈನಸ್ 1.35ರಷ್ಟು ಪರಿಮಾಣವಾಗಿದ್ದು, ಶೇ. 99.9ರಷ್ಟು ಮಂದವಾಗಿ ಕಾಣಿಸುತ್ತಾನೆ
ಯಾವಾಗ ?
ಗ್ರಹಣದ ಎಲ್ಲಾ ಹಂತಗಳು ಭಾರತದಾದ್ಯಂತ ಗೋಚರಿಸುತ್ತದೆ.
ಅರೆನೆರಳಿನ ಹಂತ ಪ್ರಾರಂಭ:
ಪಾರ್ಶ್ವ ಹಂತ ಪ್ರಾರಂಭ:
ಖಗ್ರಾಸ ಹಂತ ಪ್ರಾರಂಭ:
ಗರಿಷ್ಠ ಗ್ರಹಣ:
ಖಗ್ರಾಸ ಹಂತ ಮುಕ್ತಾಯ:
ಪಾರ್ಶ್ವ ಹಂತ ಮುಕ್ತಾಯ:
ಅರೆನೆರಳಿನ ಹಂತ ಮುಕ್ತಾಯ:
ಭೂಮಿಯ ನೆರಳು
ಗ್ರಹಣದ ಸಮಯದಲ್ಲಿ ಏಕ ರೇಖೆಯಲ್ಲಿ ಮೂಡುವ ಆಕಾಶಕಾಯಗಳು.
ನೋಡುವುದು ಹೇಗೆ?
ಭಾರತದಲ್ಲಿ UTC ಸಮಯ
20:58 15:28
21:57 16:27
23:00 17:30
23:41 18:11
00:22 18:52
01:26 19:56
02:25 20:55
ಈ ಗ್ರಹಣವು ಭಾರತ, ಚೀನಾ, ಮಂಗೋಲಿಯಾ. ಮಲೇಷ್ಯಾ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಏಷ್ಯಾ ಖಂಡದ ಇನ್ನಿತರ ದೇಶಗಳಿಂದ ಬರಿಗಣ್ಣಿನಿಂದಲೇ, ವೀಕ್ಷಿಸಬಹುದು.
ಕೆಂಬಣ್ಣ ಯಾಕೆ?
ಭೂಮಿಯು, ಚಂದ್ರನ ಮೇಲೆ ನೇರವಾಗಿ ಬೀಳುವ ಸೂರ್ಯನ ಕಿರಣಗಳನ್ನು ತಡೆಗಟ್ಟುತ್ತದೆ. ಈ ಕಾರಣ. ಭೂಮಿಯ ವಾತಾವರಣದಲ್ಲಿ ಚದುರಿಸುವ ಕೆಂಪು ಬಣ್ಣವು. ಚಂದ್ರನ ಮೈಯ ಮೇಲಿನಿಂದ ಪ್ರತಿಬಿಂಬಿಸುತ್ತದೆ. ಈ ಬೆಳಕಿನಿಂದಾಗಿ ಚಂದ್ರನು ಕೆಂಬಣ್ಣದಲ್ಲಿ ಗೋಚರಿಸುತ್ತಾನೆ.
ಈ ಗ್ರಹಣ ಅಪರೂಪವೇ? ಸುರಕ್ಷಿತವೇ?
ಖಗ್ರಾಸ ಚಂದ್ರ ಗ್ರಹಣವು ತುಂಬಾ ಅಪರೂಪದ ವಿದ್ಯಮಾನವಲ್ಲ.
ಮುಂದಿನ 5 ವರ್ಷಗಳಲ್ಲಿ, 4 ಖಗ್ರಾಸ ಚಂದ್ರ ಗ್ರಹಣಗಳು ನಡೆಯಲಿವೆ. ಇದರಲ್ಲಿ 3 ಗ್ರಹಣಗಳನ್ನು ಭಾರತದಿಂದ ನೋಡಬಹುದು.
ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಾರದು. ಆದರೆ, ಎಲ್ಲಾ ಚಂದ್ರ ಗ್ರಹಣಗಳು ಪ್ರತಿಬಿಂಬಿತವಾದ ಕಿರಣಗಳಿಂದ ಕಾಣುವ ಕಾರಣ, ಈ ಗ್ರಹಣಗಳನ್ನು ಯಾವುದೇ ಹಾನಿ ಇಲ್ಲದೆ ಬರಿಗಣ್ಣಿನಿಂದ ವೀಕ್ಷಿಸಬಹುದು.
























