ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತು ಅನನ್ಯಾ ಭಟ್ ಸುಳ್ಳು ಕೇಸ್ ದಾಖಲಿಸಿದ ಸುಜಾತ ಭಟ್ ಅವರ ವಿಡಿಯೋ ಪ್ರಸಾರ ಮಾಡಿದ ಯೂಟ್ಯೂಬರ್ ಅಭಿಷೇಕ್‌ನನ್ನು SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಸೆ. 3 ರಂದು ದಾಖಲೆಗಳ ಸಮೇತ ಸಂಜೆ SIT ಕಚೇರಿಗೆ ಆಗಮಿಸಿದ ಅಭಿಷೇಕ್‌ನನ್ನು ಸೆ. 4 ರ ಬೆಳಗ್ಗಿನ ವರೆಗೆ SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ಕೂಡಾ ಅಭಿಷೇಕ್ ವಿಚಾರಣೆ ಮುಂದುವರೆದಿದೆ.
ಅಭಿಷೇಕ್ ಬುರುಡೆಗಾಗಿ ಬಂಗ್ಲೆಗುಡ್ಡದಲ್ಲಿ ಜಯಂತ್ ಜೊತೆಗೆ ರಾತ್ರಿಯಿಡೀ ಹುಡುಕಾಟ ನಡೆಸಿದ್ದು, ಇದನ್ನು ವಿಡಿಯೋ ಚಿತ್ರೀಕರಣ ಸಹ ಮಾಡಿದ್ದರು. ಈ ಬಗ್ಗೆ ಆವರ ಮೇಲೆ ಪ್ರಕರಣ ದಾಖಲಾಗಿತ್ತು. ಹಾಗೆಯೇ ಸುಜಾತ ಭಟ್ ಪ್ರಕರಣದಲ್ಲೂ ಅಭಿಷೇಕ್ ತಮ್ಮ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡಿದ್ದು, ಈ ಬಗೆಗೂ ಅವರನ್ನು SIT ವಿಚಾರಣೆ ಮಾಡಿರುವುದಾಗಿದೆ.
























